Home
ಭಾರತದ ಹರ್ನಾಜ್ ಕೌರ್ ಗೆ 2021 ರ ವಿಶ್ವ ಸುಂದರಿ ಕಿರೀಟ

ಭಾರತದ ಹರ್ನಾಜ್ ಕೌರ್ ಗೆ 2021 ರ ವಿಶ್ವ ಸುಂದರಿ ಕಿರೀಟ
21 ವರ್ಷ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ
ವಿವಿ ಡೆಸ್ಕ್ಃ ಇಪ್ಪತೊಂದು ವರ್ಷದ ಬಳಿಕ 2021 ರ ಭುವನ ಸುಂದರಿ ಪಟ್ಟ ಭಾರತದ ಪಾಲಾಗಿದೆ.
ಭಾರತದ ಹರ್ನಾಜ್ ಕೌರ್ ಸಂಧು 71 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾಳೆ. ಭಾರತದ ಯುವತಿ ಹರ್ನಾಜ್ ಕೌರ್ ವಿಶ್ವ ಸುಂದರಿ ಪಟ್ಟಗಿಟ್ಟಿಸಿಕೊಂಡ ಹಿನ್ನೆಲೆ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ.
ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಪಂಜಾಬನ ಚಂಡಿಗಢದವರಾಗಿದ್ದಾರೆ. ಪದವಿ ನಂತರ ಓದು ಮುಂದುವರೆಸಿದ ಅವರು ಇಷ್ಟರಲ್ಲಿಯೇ ಸ್ನಾತಕೋತ್ತರ ಪದವಿ ಪಡೆಯಲಿದ್ದಾರೆ.