ಪ್ರಮುಖ ಸುದ್ದಿ

27 ಅನಕೊಂಡಗಳ ಜೊತೆಗೆ ಯುವತಿಯ ಆಟ ಚೆಲ್ಲಾಟ

ಕ್ಯಾಲಿಫೋರ್ನಿಯಾ : ಮನೆಯಲ್ಲಿ ಜಿರಳೆ, ಹಲ್ಲಿಯಂತ ಸಣ್ಣ ಸಣ್ಣ ಸರಿಸೃಪಗಳನ್ನು ಕಂಡರೆ ಮಹಿಳೆಯರು, ಯುವತಿಯರು ಪ್ರಾಣ ಹೋದಂಗೆ ಭಯಪಡುತ್ತಾರೆ.

ಆದ್ರೆ, ಇಲ್ಲೊಬ್ಬ ಯುವತಿ ಅನಕೊಂಡಗಳ ಜೊತೆ ಆಟವಾಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಅಮೆರಿಕದ ಕ್ಯಾಲಿಫೋರ್ನಿಯಾದ ಜೂಲಿಯೆಟ್ ಜೇ ಬ್ರೂವರ್ ಸುಮಾರು 27 ಅನಕೊಂಡಗಳ ಜೊತೆ ಆಟವಾಡಿ ಅಚ್ಚರಿ ಮೂಡಿಸಿದ್ದಾಳೆ. ಅಲ್ಲದೇ ಅವುಗಳನ್ನ ಮೈ ಮೇಲೆ ಎಲ್ಲ ಎಳೆದುಕೊಂಡು ಮುದ್ದಾಡಿದ್ದಾಳೆ. ಜೇ ಬ್ರೂವರ್ ಕ್ಯಾಲಿಫೋರ್ನಿಯಾದ ಫೌಂಟೇನ್ ವ್ಯಾಲಿಯಲ್ಲಿ ಸರೀಸೃಪಗಳ ಮೃಗಾಲಯ ಹೊಂದಿದ್ದಾರೆ. ಮೃಗಾಲಯದಲ್ಲಿ ಹಾವು, ಚಿರತೆ, ಹೆಬ್ಬಾವು, ಬಿಳಿ ಮೊಸಳೆ, ಆನೆ, ಆಮೆ ಹಾಗೂ ಅನಕೊಂಡಗಳು ಸೇರಿ ಇನ್ನು ಬೇರೆ ಬೇರೆ ಪ್ರಾಣಿಗಳು ಇವೆ. ಜೇ ಬ್ರೂವರ್ ತಮ್ಮ ಮಗಳು ಜೂಲಿಯೆಟ್ ಜೊತೆ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅನಕೊಂಡಗಳ ಜೊತೆ ಟೈಮ್​ಪಾಸ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button