ನಾ ಕಂಡಂತೆ ದರ್ಶನಾಪುರ…ಪ್ರಾಧ್ಯಾಪಕ ಹಿರೇಮಠ ಬರಹ
ಅಭಿವೃದ್ಧಿ ಪರ ಚಿಂತಕ ಶರಣಬಸಪ್ಪ ಗೌಡ ದರ್ಶನಾಪುರ
ಸಗರ ನಾಡಿನ ಅಪರೂಪದ ರಾಜಕಾರಣಿ ಶ್ರೀ ಶರಣಬಸ್ಸಪ್ಪಗೌಡ ದರ್ಶನಾಪುರ.ಸರಳ,ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು.ಮಿತಭಾಷೆ,ಹೆಚ್ಚುಕೆಲಸ.ಮಾತಿಗಿಂತ ಕೃತಿಯೇ ಲೇಸು ಎಂದು ತಿಳಿದವರು.ಅವರ ತಲೆಯಲ್ಲಿ ಸದಾ ಅಭಿವೃದ್ಧಿ ಪರ ಚಿಂತನೆಗಳು.ಸಣ್ಣವರೇ ಇರಲಿ,ದೊಡ್ಡವರೇ ಇರಲಿ ಅವರು ಗೌರವಿಸುವ ರೀತಿ,ಮಾತನಾಡುವ ರೀತಿ ನನಗೆ ತುಂಬಾ ಮೆಚ್ಚುಗೆ.
ಅವರು 25 ವರ್ಷದ ಹಿಂದೆ ಪ್ರಥಮ ಬಾರಿಗೆ ಸಚಿವರಾದಾಗ ನಾನು ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡುತ್ತಿದ್ದೇ,ನನ್ನ ಕಾಲೇಜಿನ ಬಿಡುವಿನ ವೇಳೆಯಲ್ಲಿ,ಭಾನುವಾರ ಹಾಗೂ ರಜಾದಿನಗಳಲ್ಲಿ ನಾನು ಶಹಾಪೂರ ತಾಲೂಕಿನ ಪ್ರತಿ ಹಳ್ಳಿಗೆ ಹೋಗಿ, ಅಲ್ಲಿ ಯಾವ ಗ್ರಾಮದ ಪ್ರಮುಖರನ್ನು ಬೆಟ್ಟಿ ಮಾಡದೇ ಆ ಗ್ರಾಮದಲ್ಲಿ ಮನೆ ಇಲ್ಲದೆ ಮತ್ತು ಭೂಮಿ ಇಲ್ಲದ ಕಡು ಬಡವರನ್ನು ಬೇಟಿ ಯಾಗಿ ಅಂತಹ ಜನರ ಒಂದು ಪಟ್ಟಿಯನ್ನೇ ಮಾಡಿ ಮಾನ್ಯ ಸಚಿವರಾಗಿದ್ದ ಶ್ರೀ ಶರಣಬಸ್ಸಪ್ಪಗೌಡ ದರ್ಶನಾಪುರ ಸಾಹೇಬರಿಗೆ ನೀಡಿದ್ದೇ…
ನಾನು ನೀಡಿದ ಬಹುತೇಕ ಜನರಿಗೆ ಅವರು ಅನುಕೂಲ ಕಲ್ಪಿಸಿದರೂ ಹಾಗೂ ಅವರಿಗೆಲ್ಲ ಆಶ್ರಯ ಮನೆ ಮಾಡಿಸಿಕೊಟ್ಟರು. ಹೀಗೆ ಬಡವರಿಗಾಗಿ ಸಹಾಯ ಮಾಡುವ ಹಂಬಲ, ದೊಡ್ಡ ಮನಸ್ಸು ಅವರದು.
ಅವರು ತಲೆಯಲ್ಲಿ ಜಾತಿ,ಮತ, ಧರ್ಮ ಭೇದವಿಲ್ಲ.ಎಲ್ಲರನ್ನು ಸಮಾನವಾಗಿ ನೋಡುವ ದೃಷ್ಟಿಕೋನ ಅವರದು.ಅವರು ಸಚಿವರಾಗಿದ್ದ ಅವಧಿಗಳಲ್ಲಿ ಶಹಾಪುರ ಮತಕ್ಷೇತ್ರದ ಲ್ಲಿ ಅಷ್ಟೇ ಅಲ್ಲ.ರಾಜ್ಯದ ಜನತೆಗೆ ಅವರು ಸೇವೆ ದೊರಕಿದೆ.
ಅವರ ಅಭಿಮಾನಿಗಳು ಪ್ರಥಮ ಸಚಿವರಾದ 25 ವಸಂತಗಳ ಸಂಭ್ರಮಾಚರಣೆ ಮಾಡಿದ್ದು ಗಮನಿಸಿ ಸಂತಸವಾಯಿತು. ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಅವಕಾಶಕ್ಕಾಗಿ,ಸಚಿವರಾಗುವುದಕ್ಕಾಗಿ ಎಂದೂ ಲಾಭಿ ಮಾಡಿದವರಲ್ಲ.
ಗುಂಪುಗಾರಿಕೆ ರಾಜಕಾರಣ ಅವರು ತಲೆಯಲ್ಲಿ ಇಲ್ಲ.ಅವಕಾಶ ತಾನಾಗಿ ಬಂದರೆ ತಾವು ಏನು ಎಂಬುದನ್ನು ಕೆಲಸಮಾಡಿ ತೋರಿಸುವ ಪ್ರಭುದ್ದ ರಾಜಕಾರಣ ಅವರದು.ಅವರ ರಾಜಕೀಯ ಅವಧಿಯಲ್ಲಿ ಶಹಾಪುರ ಮತಕ್ಷೇತ್ರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ.
ಈ ಎಲ್ಲ ಸಜ್ಜನಿಕೆಯ,ಅಭಿವೃದ್ದಿ ಪರ ಚಿಂತನೆಗೆ ಅವರು ತಂದೆ ಜನಾನುರಾಗಿ,ರಾಜಕೀಯ ಮುತ್ಸದ್ಧಿ ದಿವಂಗತ ಬಾಪುಗೌಡ ದರ್ಶನಾಪುರರ ಪ್ರೇರಣೆ,ಸಂಸ್ಕಾರ ಹಾಗೂ ಅಭಿವೃದ್ಧಿ ಪರ ಚಿಂತನೆ ಗಳು ಇವರಲ್ಲಿ ಕಾಣಬಹುದು.
ಶರಣಬಸಪ್ಪ ಗೌಡ ದರ್ಶನಾಪುರ ಸಾಹೇಬರಿಗೆ ಆಯುಷ್ಯ, ಆರೋಗ್ಯ ಕೊಟ್ಟು ದೇವರು ಕಾಪಾಡಲಿ,ಶಹಾಪೂರ ಹಾಗೂ ರಾಜ್ಯದ ಜನತೆಗೆ ಅವರ ಸೇವೆ ದೊರಕಲಿ, ಆವರ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಅವರಿಗೆ ದೊರೆಯಲಿ ಎಂದು ಶುಭ ಹಾರೈಸುತ್ತೇನೆ…💐💐👍🙏
–ಡಾ.ಗಂಗಾಧರಯ್ಯ ಹಿರೇಮಠ
ಪ್ರಾಧ್ಯಾಪಕರು, ದಾವಣಗೆರೆ.