ಅಪ್ಪ ಎಂದರೆ ಎಲ್ಲರಿಗೂ ಆಕಾಶವಲ್ಲ! ಹಲವರಿಗೆ ಹೇಳಿಕೊಳ್ಳಲಾಗದ ಆಘಾತ..!
ಅಪ್ಪ ಎಲ್ಲರಿಗೂ ಆಕಾಶನಾ.? ಕೆಲ ಮಕ್ಕಳಿಗೆ..? ವಾಸ್ತವಿಕತೆ ಚಿಂತನೆ
ಅಪ್ಪ ಎಂದರೆ ಇಲ್ಲಿ ಎಲ್ಲರಿಗೂ ಆಕಾಶವಲ್ಲ! ಹಲವರಿಗೆ ಹೇಳಿಕೊಳ್ಳಲಾಗದ ಆಘಾತ..!
ಮಕ್ಕಳು ತಪ್ಪು ಮಾಡಿದರೆ ದೂರು ಕೊಡುತ್ತೇವೆ ಎಂದು ಹೆದರಿಸುವವರಿಗೆ, ತಂದೆಯೇ ಮಕ್ಕಳಿಗೆ ಹಿಂಸೆ ನೀಡುತ್ತಿದ್ದರೆ ಇವರ ಕಾನೂನು ಏನು ಹೇಳುತ್ತದೆ ಅಂತ ಕೇಳಬೇಕು!
ಹೀಗೆ ಅನೇಕರು ನನ್ನ ಕೇಳುತ್ತಿರುತ್ತಾರೆ.
ವಿನಾಕಾರಣ ಅಪ್ಪನಿಂದ ಹಿಂಸೆ ಅನುಭವಿಸುತ್ತಲೇ ಇದ್ದಾರೆ. ಇಂತಹ ನಿಷ್ಕರುಣೆಯ ತಂದೆಯಂದಿರಿಂದ ‘ಮುಕ್ತ’ರಾಗುವುದೇ ಲೇಸು. ಆದರೆ ಅದು ಅಷ್ಟು ಸುಲಭವಲ್ಲ. ಹಿರಿಯರ ಆಸ್ತಿ ತಮ್ಮಲ್ಲಿ ಇಟ್ಟುಕೊಂಡು, ಹಾಳು ಮಾಡುತ್ತ ಅವರು ಜೋರು ಮಾಡುತ್ತಲೇ ಇರುತ್ತಾರೆ.
ಹಿರಿತನ ಬಂದ ಮೇಲೆ ಮಾಗಿದರೇನೆ ಚಂದ. ಆದರೆ, ಇವರು ಮಕ್ಕಳಿಗೆ ಸೋಲಲ್ಲ-ಮಾಗಲ್ಲ. ಇನ್ನೂ ತಲೆ ಮಾಸದವರ ರೀತಿ ಮಕ್ಕಳಿಗೆ ಜೀವ ತಿನ್ನುತ್ತ ಕೊಬ್ಬಿ ಓಡಾಡುತ್ತಲೇ ಇತುತ್ತಾರೆ. ಹೀಗಾದರೆ ಇವರು ಬದುಕಿದ್ದೂ ಏನರ್ಥ!? ಇಂತಹವರು ನಮ್ಮ ಸುತ್ತ ಭಾಳ ಇದ್ದಾರೆ.
ಇವರು ಬೇಗ ತಮ್ಮ ಜವಾಬ್ದಾರಿ ಬಿಟ್ಟುಕೊಟ್ಟರೆ ಆ ಮಕ್ಕಳು ಆರಾಮಾಗಿ ದುಡಿದುಕೊಂಡು ಇರುತ್ತವೆ. ಆದರೆ ಬಿಡಲ್ಲ, ಹೋಗಲಿ ಚೂರು ನೆಮ್ಮದಿಯೂ ಕೊಡಲ್ಲ. ವಿಜಯ ನಗರದ ಸಾಮ್ರಾಜ್ಯವೇನೊ ಅನ್ನುವಂತೆ ಹಿಡಕೊಂಡು ಏನು ಇಲ್ಲೇ ಕಾಯಂ ಆಗಿ ಇರುತ್ತೇವೆ ಅನ್ನಂಗೆ ಭಾರವಾಗಿ ಬಾಳುತ್ತಾರೆ. ಹೀಗಾಗಿ ಸಾವಿರಾರು ತಂದೆ-ಮಕ್ಕಳ ಮಧ್ಯೆ ಮಾತೇ ಇಲ್ಲ. ಬರೀ ಕಂದಕ.
ಈ ದೊಡ್ಡವರಾದ ಅನೇಕರಿಗೆ ತಮ್ಮ ಮನೆ, ಬದುಕಿನ ಸೂಕ್ಷ್ಮತೆ, ಕನಿಷ್ಠ ನಾಚಿಕೆಯೂ ಇಲ್ಲ. ಇದು ಸಮಾಜದ ಬಹುಪಾಲಿನ ನೋವಿನ ಸಂಗತಿ. ಇದೆಲ್ಲ ಇಟ್ಟುಕೊಂಡು ಬರೀ ನಾವು ಅಪ್ಪ ಎಂದರೆ ಆಕಾಶ ಅಂತೆಲ್ಲ ಹೇಳುತ್ತ ಕುಳಿತರೆ ಆಗಲ್ಲ. ಇಂತಹದಕ್ಕೆಲ್ಲ ಚಿಕಿತ್ಸೆ ಬೇಕು.
ಸರಿ ಅಲ್ಲವೇ.. ನೀವೇನಂತೀರಿ?
–ಶಿವಕುಮಾರ್ ಉಪ್ಪಿನ