ಪ್ರಮುಖ ಸುದ್ದಿ
ಯಾದಗಿರಿಃ ಮೂವರು ಶಿಕ್ಷಕರಿಗೆ ಕೊರೊನಾ
ಯಾದಗಿರಿಃ ಮೂವರು ಶಿಕ್ಷಕರಿಗೆ ಕೊರೊನಾ
ಯಾದಗಿರಿಃ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭಗೊಂಡು ಮೂರು ದಿನ ಕಳೆಯುತ್ತಿದ್ದಂತೆ ಜಿಲ್ಲೆಯಲ್ಲಿ ಒಟ್ಟು 6 ಜನ ಶಿಕ್ಷಕರಿಗೆ ಕೊರೊನಾ ತಗುಲಿರುವದು ಬೆಳಕಿಗೆ ಬಂದಿದೆ.
ಶಾಲಾ ಆರಂಭದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾದ 3 ಶಿಕ್ಷಕರಿಗೆ ಕೊರೊನಾ ದೃಢಪಟ್ಟರೆ, ಇಂದು ಮತ್ತೆ ಶಹಾಪುರ, ಸುರಪುರ ಮತ್ತು ಗುರಮಠಕಲ್ ನಲ್ಲಿ ತಲಾ ಒಬ್ಬ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಸಹಜವಾಗಿ ಪೋಷಕರು, ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.