ಯಕ್ಷಿಂತಿಃ ಸಣ್ಣಹಳ್ಳದಲ್ಲಿ ಕಾಣಿಸಿಕೊಂಡ ಮೊಸಳೆ
ಸಣ್ಣಹಳ್ಳದಲ್ಲಿ ಕಾಣಿಸಿಕೊಂಡ ಮೊಸಳೆ ಸಾವು
yadgiri, ಶಹಾಪುರಃ ಶಹಾಪುರ ತಾಲೂಕು ವಿಭಜನೆ ನಂತರ ನೂತನ ತಾಲೂಕು ವಡಿಗೇರಾ ವ್ಯಾಪ್ತಿಗೆ ಸೇರುವ ಯಕ್ಷಿಂತಿ ಗ್ರಾಮದ ಸಣ್ಣ ಹಳ್ಳದಲ್ಲಿ ಮೊಸಳೆಯೊಂದು ಕಂಡು ಬಂದಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಗ್ರಾಮ ಸಮೀಪದ ಕೃಷ್ಣಾ ನದಿ ದಡದಲ್ಲಿ ಶಹಾಪುರ ತಾಲೂಕಿನ ಶಾರದಳ್ಳಿ ಗ್ರಾಮದ ಕುರಿಗಾಯಿಯನ್ನು ಮೊಸಳೆಯೊಂದು ಬಲಿ ಪಡೆದಿತ್ತು. ಇದೀಗ ಯಕ್ಷಿಂತಿ ಗ್ರಾಮದ ಸಣ್ಣ ಹಳ್ಳಕ್ಕೆ ಬಂದಿರುವದು ಜನರಲ್ಲಿ ಭಯಭೀತಗೊಂಡಿದ್ದಾರೆ. ಹಳ್ಳದ ಕಡೆ ಹೋದವರು ಮೊಸಳೆಯನ್ನು ಕಂಡಿದ್ದು, ಯಾರೊ ಕಲ್ಲು ಎತ್ತಿ ಹಾಕಿರುವ ಕಾರಣ ಮೊಸಳೆ ಸಾವನ್ನಪ್ಪಿದೆ ಎನ್ನಲಾಗಿದೆ.
ಮೊಸಳೆ ಸಾವನ್ನಪ್ಪಿದರೂ ಜನರು ಹಳ್ಳದ ಕಡೆ ಹೋಗಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಟ್ಟೆ ಹೊಗೆಯಲು, ದನ ಕರುಗಳಿಗೆ ನೀರು ಕುಡಿಸಲು ರೈತಾಪಿ ಜನರ ತೆರಳುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಣ್ಣಹಳ್ಳ ಪೂರ್ಣ ಪರಿಶೀಲನೆ ನಡೆಸಬೇಕಿದೆ. ಜನರಲ್ಲಿ ಮನೆ ಮಾಡಿದ ಭಯಭೀತಿ ಹೋಗಲಾಡಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.