ಹರ್ಷ ಕೊಲೆಃ ಅಂತರಾಷ್ಟ್ರೀಯ ಮಟ್ಟದ ಷಡ್ಯಂತರ – ಯತ್ನಾಳ್

ಹರ್ಷ ಕೊಲೆಃ ಅಂತರಾಷ್ಟ್ರೀಯ ಮಟ್ಟದ ಷಡ್ಯಂತರ – ಯತ್ನಾಳ್
ಕೇರಳ ಗಡಿ ಭಾಗದಿಂದ ಶಸ್ತ್ರಾಸ್ತ್ರ ರವಾನೆ ಯತ್ನಾಳ ಆರೋಪ
ವಿಜಯಪುರಃ ಹರ್ಷ ಕೊಲೆ ಇದೊಂದು ಅಂತರಾಷ್ಟ್ರೀಯ ಷಡ್ಯಂತರ. ಅಂತರಾಷ್ಟ್ರೀಯ ಮಟ್ಟದಿಂದ ಫಂಡಿಂಗ್ ನೆರವು. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ರವಾನೆ ಈ ಎಲ್ಲಾ ಪ್ಲಾನ್ಡ್ ಪ್ರಕಾರನೇ ಹಿಂದೂ ಯುವಕರ ಕಗ್ಗೊಲೆಗಳು ನಡೆಯುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
ಹಿಂದು ಯುವಕರನ್ನೆ ಟಾರ್ಗೇಟ್ ಮಾಡಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ಕಾಣಬಹುದು. ಇದೆಲ್ಲ ಕಾಶ್ಮೀರಿ ಮಾದರಿಯಲ್ಲಿಯೇ ಬರ್ಬರ್ ಹತ್ಯೆಗಳು ಸಂಚೂ ರೂಪಿತವಾಗಿ ನಡೆಯುತ್ತಿವೆ.
ಕಾಂಗ್ರೆಸ್ ಸರ್ಕಾರ ಇದ್ದಾಗಲಂತೂ ಈ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ಕೆಲಸಾನೇ ಇದು ಮೀಟಿಂಗ್ ಮಾಡೋದು ಎಲ್ಲಿ ಹಿಂದೂಗಳು ಒಗ್ಹಾಟ್ಟಾಗಿದ್ದಾರೋ ಆ ಭಾಗದಲ್ಲಿ ಯುವಕರ ಮುಂದಾಳತ್ವವಹಿಸಿದ ಯುವಕರನ್ನ ಗುರುತಿಸಿ ಕೊಲೆಗೈಗುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡೋದೆ ಇವರ ಕೆಲಸವಾಗಿದೆ ಇದಕ್ಕೆಲ್ಲ ಕಡಿವಾಣ ಅಗತ್ಯವಿದೆ.
ಈಗಾಗಲೇ ನಮ್ಮ ಸರ್ಕಾರ ಕೊಲೆಗಡುಕರನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಇವರಿಗೆಲ್ಲ ಗಲ್ಲಿಗೇರಿಸಬೇಕು ಆಗ ಇದಕ್ಕೆ ತಗಯ ಹಾಡಲು ಸಾಧ್ಯವಿದೆ. ಇಲ್ಲಾಂದ್ರೆ ಕಾಂಗ್ರೆಸ್ ಸರ್ಕಾರ ಬರೋದು ಹಿಂದೂ ಯುವಕರನ್ನ ಕೊಲೆಗೈದ ಕೇಸ್ ಗಳನ್ನು ಮುಚ್ಚಿ ಹಾಕೋದು ಇದೇ ಕೆಲಸ ನಡಿತಿದೆ ಎಂದು ಗಂಭೀರ ಆರೋಪ ಮಾಡಿದರು. ಕೂಡಲೇ ಆರೋಪಿಗಳಿಗೆ ಗಲ್ಲಿಗೇರಿಸಬೇಕು. ಬರಿ ಕೇಸ್ ದಾಖಲಿಸಿದರೆ ಸಾಲದು ಎಂದರು.