ಪ್ರಮುಖ ಸುದ್ದಿ
ಯುಗಾದಿ ಬಳಿಕ ಉಕ ಭಾಗದವರೇ ಸಿಎಂ – ಯತ್ನಾಳ್ ಹೊಸ ಬಾಂಬ್
ಯುಗಾದಿ ಬಳಿಕ ಉಕ ಭಾಗದವರೇ ಸಿಎಂ – ಯತ್ನಾಳ್ ಹೊಸ ಬಾಂಬ್
ಚಿತ್ರದುರ್ಗಃ ರಾಜ್ಯದಲ್ಲಿ ಯುಗಾದಿ ಬಳಿಕ ಎರಡನೇ ಹಂತದ ನಾಯಕರಿಗೆ ಅಧಿಕಾರ ದೊರೆಯಲಿದೆ. ಹಿರಿಯ ಸಚಿವರೆಲ್ಲರೂ ಪಕ್ಷ ಸಂಘಟನೆಗೆ ತೆರಳಲಿದ್ದು, ಇದರಲ್ಲಿ ಸಿಎಂ ಬಿಎಸ್ ವೈ ಸಹ ಸೇರಿದ್ದು, ಉಕ ಭಾಗದವರೇ ಸಿಎಂ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾನು ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವನಾಗಲ್ಲ. ನನಗೆ ಸಚಿವ ಸ್ಥಾನ ನೀಡಿ ಎಂದು ನಾನು ಯಾವ ಮಠಾಧೀಶರ ಕಾಲು ಹಿಡಿದಿಲ್ಲ.
ದುಡ್ಡುಕೊಟ್ಟು ಕಾಲು ಹಿಡಿದು ಸಚಿವನಾಗುವವ ನಾನಲ್ಲ. ಹೈಕಮಾಂಡ್ ನಿರ್ಧಾರದಂತೆ ನಡೆಯಲಿದೆ. ಎರಡನೇ ಹಂತದ ನಾಯಕರಿಗೆ ಅಧಿಕಾರ ಎಂದು ಬಂದಾಗ ಯಡಿಯೂರಪ್ಪ ಹಿಡ್ಕೊಂಡು ಎಲ್ಲರೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಇಷ್ಟರಲ್ಲಿಯೇ ಗೊತ್ತಾಗಲಿದೆ. ಯುಗಾದಿ ಬಳಿಕ ಉಕ ಭಾಗದವರೇ ಸಿಎಂ ಆಗಲಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.