ಪ್ಲೀಜ್ THINK AND VOTE ಎಂದ ಗುರು ಪಾಟೀಲ್
ಬಿಜೆಪಿ ಕ್ಯಾಂಪೇನ್ ಜೋರು
ಗುರು ಹೊಟೇಲ್ ನಲ್ಲಿ ಪ್ರಸಾದ ಸೇವಿಸಿದ ಪಾಟೀಲ್
ಕೈ ಮುಗಿದು THINK AND VOTE ಹೇಳುತ್ತಿರುವ ಗುರು ಪಾಟೀಲ್
ಶಹಾಪುರಃ ಇಂದು ಬೆಳ್ಳಂಬೆಳಗ್ಗೆ ನಗರದಲ್ಲಿ ಪ್ರಚಾರ ಆರಂಭಿಸಿದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಪ್ರಚಾರದ ಮಧ್ಯ ಮಾರುತಿ ರಸ್ತೆಯಲ್ಲಿರುವ ಹಳೇ ಹೊಟೇಲ್ ಗುರು ಪ್ರಸಾದ ನಲ್ಲಿ ಉಪಾಹಾರ ಸೇವಿಸಿದರು.
ಇದೇ ಸಂದರ್ಭದಲ್ಲಿ ಹೊಟೇಲ್ ಮಾಲಕರಿಗೂ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ದೇಶ ಸುಭದ್ರೆತೆಗಾಗಿ ಮೋದಿಜಿಯವರಂಥ ನಾಯಕತ್ವ ಅಗತ್ಯವಿದೆ. ಮೋದಿಜಿಯವರಿಗೆ ದೇಶವೇ ಮನೆ ದೇಶದ ಜನರೇ ಸಂಬಂಧಿಕರು ದೇಶಕ್ಕಾಗಿ ಹಗಲಿರಳು ಶ್ರಮಿಸುವ ಮೋದಿಜೀಯಂಥ ನಾಯಕರು ಮತ್ತೊಮ್ಮೆ ಸಿಗುವದು ದುರ್ಲಭ.
ಹೀಗಾಗಿ ನಾವೆಲ್ಲ ಸದೃಢ ಭಾರತ ನಿರ್ಮಾಣಕ್ಕಾಗಿ ದಿನದ 18 ತಾಸು ದುಡಿಯುತ್ತಿರುವ ಮೋದಿಜಿಯವರಿಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಯನ್ನು ಗೆಲ್ಲಿಸಲೇಬೇಕಾಗಿದೆ.
ನಾವೆಲ್ಲ ಮೋದಿಜಿಗಾಗಿ ಮೋದಿಜಿ ದೇಶಕ್ಕಾಗಿ ಕೆಲಸ ಮಾಡಲಿದ್ದಾರೆ. ಮತದಾರರು ಯೋಚಿಸಿ ಮತ ನೀಡಬೇಕಿದೆ ಎಂದರು.
ಕೊನೆಯಲ್ಲಿ ಎಲ್ಲರಿಗೂ
THINK AND VOTE ಎಂದು ಕೈ ಮುಗಿದು ಹೊರ ನಡೆದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ವಸಂತ ಕುಮಾರ, ಲಾಲನಸಾಬ ಸೇರಿದಂತೆ ಕಾರ್ಯಕರ್ತರು ಇದ್ದರು.