ಪ್ರಮುಖ ಸುದ್ದಿ
ಅಕಾಲಿಕ ಆಲಿಕಲ್ಲು ಮಳೆಃ ಕಾಶ್ಮೀರ ಕಂಡ ಅನುಭವ
ಶಹಾಪುರಃ ಹಿಮಾಲಯ, ಕಾಶ್ಮೀರ ಪ್ರದೇಶಗಳ ಬಿಂಬ ತೋರಿದ ಆಲಿಕಲ್ಲು ಮಳೆ

ಅಕಾಲಿಕ ಆಲಿಕಲ್ಲು ಮಳೆ ಃ ಕಾಶ್ಮೀರ ಕಂಡ ಅನುಭವ
ಆಲಿಕಲ್ಲು ಮಳೆಃ ಎಲ್ಲೆಲ್ಲೂ ಹಿಮ ರಾಶಿ
yadgiri, ಶಹಾಪುರಃ ಶನಿವಾರ ಬೆಳಗಿನ ಜಾವ ಅಕಾಲಿಕವಾಗಿ ಆಲಿಕಲ್ಲು ಮಳೆ ಸುರಿದಿದ್ದು, ತಾಲೂಕಿನ ಹಲವಡೆ ದೊಡ್ಡ ದೊಡ್ಡ ಮಂಜುಗಡ್ಡೆಗಳು ಬಿದ್ದಿವೆ. ತಾಲೂಕಿನ ಕನ್ಯಾಕೋಳೂರ ಸೀಮಾಂತರ ಹೊಲಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು ಮಳೆ ಬಿದ್ದಿರುವ ಪರಿಣಾಮ ಇಡಿ ಹೊಲ ತುಂಬೆಲ್ಲ ಬೆಳ್ಳಗೆ ಮಂಜುಗಡ್ಡೆಗಳು ಬಿದ್ದಿರುವದು ಕಾಶ್ಮೀರ, ಹಿಮಾಲಯದಂತೆ ತಮ್ಮ ಹೊಲ ಕಂಡು ಮಕ್ಕಳು, ಯುವಕರು ಪುಳುಕಿತಗೊಂಡಿದ್ದಾರೆ.
ಮಂಜು ಕೈಯಲ್ಲಿಡಿದು ಆಟವಾಡಿ ಒಂದಡೆ ಖುಷಿ ಪಟ್ಟರೆ, ರೈತರು ಇನ್ನೊಂದಡೆ ಬೆಳೆ ಹಾನಿಯಾಗಿದೆ ಎಂದು ಕಣ್ಣೀರು ಸುರಿಸುವಂತಾಗಿದೆ. ಇಡಿ ಹೊಲ ಹಿಮಾಲಯದ ಭಾಗದಂತೆ ಗೋಚರಿಸಿರುವದು ಹಲವಡೆ ನಿಬ್ಬೆರಗು ಮೂಡುವಂತಾಗಿದೆ. ಇದೇ ಮೊದಲ ಬಾರಿಗೆ ಹಿಮಾಲಯದ ನೋಟ ಸಗರನಾಡಿನ ಭಾಗದಲ್ಲಿ ನೋಡಿದಂತಾಗಿದೆ ಎಂದು ಪ್ರಜ್ಞಾವಂತ ಯುವಕನೋರ್ವ ಸಂತಸದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾನೆ.