ಗೇಟ್ ಹಾಕಲು ಬಂದ ಅಧಿಕಾರಿಗಳಿಗೆ ರೈತರು ತರಾಟೆ..!
ಪರಿಹಾರ ವಿಚಾರದಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ ರೈತರು…!
ಯಾದಗಿರಿಃ ಗೇಟ್ ಅಳವಡಿಸಲು ಆಗಮಿಸಿದ ಆರ್ ಟಿಪಿಎಸ್ ಅಧಿಕಾರಿಗಳಿಗೆ ರೈತರು ತರಾಟೆಗೆ ತೆಗೆದುಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಸಮೀಪದ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದೆ.
ಪರಿಹಾರ ನೀಡುವ ವಿಚಾರದಲ್ಲಿ ಆರ್ ಟಿಪಿಎಸ್ ಅಧಿಕಾರಿ ಪ್ರಭುಸ್ವಾಮಿ ಹಾಗೂ ರೈತರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ.
ರಾಯಚೂರು ಶಾಖೋತ್ಪನ್ನ ಘಟಕಕ್ಕೆ ನೀರು ಪೂರೈಕೆ ಮಾಡುವ ಹಿನ್ನೆಲೆ ಕರ್ನಾಟಕ ಪವರ್ ಕಾರ್ಪೋರೇಷನ್ ವತಿಯಿಂದ ಈ ಹಿಂದೆ 2017 ರಲ್ಲಿ ಗುಂಡ್ಲೂರು ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು, ಬ್ಯಾರೇಜ್ ನಿರ್ಮಾಣದಿಂದ ಹಿನ್ನಿರಿನಿಂದ ಶಿವಪುರ, ಗೋನಾಲ ಗ್ರಾಮದ ರೈತರು ಬೆಳೆ ಹಾನಿ ಜೊತೆ ಭೂಮಿ ಕಳೆದುಕೊಂಡಿದ್ದಾರೆ.
ಕಳೆದು ಐದು ವರ್ಷಗಳಿಂದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಎಕರೆ ಭೂಮಿ ಹೊಂದಿದ್ದ ರೈತರು ಬ್ಯಾರೇಜ್ ನಿರ್ಮಾಣದಿಂದ ಬೆಳೆ ನಷ್ಟ ಅನುಭವಿಸಿದ್ದು, ಆರ್ ಟಿಪಿಎಸ್ ಅಧಿಕಾರಿಳಿಗೆ ಬೆಳೆ ಹಾನಿ, ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರದ ಹಣ ನೀಡುವುದಕ್ಕೆ ಈ ವರೆಗೂ ಅಧಿಕಾರಿಗಳು ಸ್ಪಂದಿಸಿಲ್ಲ.
ಮತ್ತೆ ರೈತರು ಕಳೆದ 18 ದಿನಗಳಿಂದ ಬ್ಯಾರೇಜ್ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮನವೊಲಿಸಿ ಬ್ಯಾರೇಜ್ ನಲ್ಲಿ ನೀರು ಸಂಗ್ರಹ ಮಾಡಲು ಗೇಟ್ ಹಾಕಲು ಬಂದ ಅಧಿಕಾರಿಗಳಿಗೆ ರೈತರು ತರಾಟೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.
ಪರಿಹಾರ ನೀಡುವರಿಗೆ ನಾವು ಗೇಟ್ ಹಾಕಲು ಬಿಡಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಈ ವೇಳೆ ರೈತರು ಗೇಟ್ ಹಾಕಲು ಮುಂದಾದ ಅಧಿಕಾರಿಗಳಿಗೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಈ ವೇಳೆ ಆರ್ ಟಿಪಿಎಸ್ ಮುಖ್ಯ ಇಂಜಿನಿಯರ್ ಪ್ರಭುಸ್ವಾಮಿ ಅವರು ಮಾತನಾಡಿ, ಪರಿಹಾರ ನೀಡುವ ಬಗ್ಗೆ ಕೇಂದ್ರ ಕಚೇರಿಗೆ ಈಗಾಗಲೇ ಪತ್ರ ಕಳುಹಿಸಲಾಗುತ್ತದೆ.
ಕೇಂದ್ರ ಕಚೇರಿಯಿಂದ ಬಂದ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದ್ದಾರೆ.
ವರದಿ – ಸತೀಶ ಎಸ್. ಮೂಲಿಮನಿ.