ಪ್ರಮುಖ ಸುದ್ದಿ
ಅಪಘಾತದಲ್ಲಿ ಮಗನ ಸಾವುಃ ನೋವು ತಾಳದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ
ರಸ್ತೆ ಅಪಘಾತದಲ್ಲಿ ಮಗನ ಸಾವು- ವಿಷಯ ತಿಳಿದ ತಂದೆ ಆತ್ಮಹತ್ಯೆ

ರಸ್ತೆ ಅಪಘಾತದಲ್ಲಿ ಮಗನ ಸಾವು- ವಿಷಯ ತಿಳಿದ ತಂದೆ ಆತ್ಮಹತ್ಯೆ
ಅಪಘಾತದಲ್ಲಿ ಮಗನ ಸಾವು ಸುದ್ದಿ ಕೇಳಿದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ
ಯಾದಗಿರಿ, ಶಹಾಪುರಃ ನಿನ್ನೆ ರಾತ್ರಿ ಬೈಕ್ ಮೇಲೆ ಶಹಾಪುರದಿಂದ ತಮ್ಮೂರಿಗೆ ಹೊರಟಿದ್ದ ಯುವಕನೋರ್ವ ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ ಹಿನ್ನೆಲೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲುಕಿನ ಮದ್ರಿಕಿ ಗ್ರಾಮ ಬಳಿ ಬೀದರ-ಶ್ರೀರಂಗಪಟ್ಟಣ ಹೆದ್ದರಿ ಮೇಲೆ ನಡೆದಿದೆ.
ಶಿವಕುಮಾರ ಸಮ್ಮಣಿ ಸಾ.ಮದ್ರಿಕಿ (24) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಮೃತ ಯುವಕ ಶಿವಕುಮಾರನ ತಂದೆ ಬಸವರಾಜ ಸಮ್ಮಣಿ (52) ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿದು ಎದೆಯೊಡೆದ ಆತ ಇಂದು ಬೆಳಗಿನ ಜಾವ ಗ್ರಾಮದ ಬಾವಿಯೊಂದಕ್ಕೆ ಹಾರಿ ಮೃತಪಟ್ಟ ದುರಂತ ನಡೆದಿದೆ. ಅಪಘಾತ ಘಟನೆ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.