ಕಲ್ಬುರ್ಗಿಃ ಭೀಕರ ಅಪಘಾತ ಐವರ ದುರ್ಮರಣ
ಗಾಣಗಾಪುರದಿಂದ ಮಹಾರಾಷ್ಟ್ರಕ್ಕೆ ವಾಪಸ್ ಹೊರಟಿದ್ದ ಕಾರು
ಕಲ್ಬುರ್ಗಿಃ ಗಾಣಗಾಪುರದ ದತ್ತಾತ್ರೇಯ ಸ್ವಾಮಿ ದರ್ಶನ ಪಡೆದು ವಾಪಾಸ್ ಮಹಾರಾಷ್ಟ್ರಕ್ಕೆ ಹೊರಟಿದ್ದ ಕಾರೊಂದು ಗಿಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು ಕಾರಿನೊಳು ಇದ್ದ ಐವರು ದುರ್ಮರಣ ಹೊಂದಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಬಾಬಾಸಾಹೇಬ ಸಾಕಾರಾಂ ವೀರ (54), ಕೋಮಲ್ ತಂದೆ ಬಾಬಾಸಾಹೇಬ್, ರಾಣಿ ತಂದೆ ಬಾಬಾಸಾಹೇಬ್ ,ಅನ್ನವ್ ಹೀರಾಬಾಯಿ ಬಡೆ, ಛಾಯಾ ಗಂಡ ಬಾಬಾಸಾಹೇಬ್ (50) ದುರ್ಮರಣ ಹೊಂದಿದ್ದಾರೆ.
ಅಲ್ಲದೆ ಸಾಹಿಲಿ ತಂದೆ ಬಾಬಾಸಾಹೇಬ್ (13), ಚೈತ್ರಾಲಿ ತಂದೆ ದಿನಕರ್ ಸುರವಾಸಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.