ಪ್ರಮುಖ ಸುದ್ದಿ
ಶಹಾಪುರಃಟಂಟಂ ಪಲ್ಟಿ ಓರ್ವನ ಸಾವು
ಟಂಟಂ ಪಲ್ಟಿ ಓರ್ವನ ಸಾವು
ಶಹಾಪುರ: ಟಂಟಂ ಆಟೋವೊಂದು ಪಲ್ಟಿಯಾಗಿ ಆಟೋದಲ್ಲಿ ಕುಳಿತಿದ್ದ ಓರ್ವ ಸಾವನ್ನಪ್ಪಿದ ಘಟನೆ ಮಂಗಳವಾರ ತಡ ರಾತ್ರಿ ಸಮೀಪದ ಭೀಮರಾಯನ ಗುಡಿ ಹೆದ್ದಾರಿ ಮೋಟಗಿ ಹೊಟೇಲ್ ಹತ್ತಿರ ಜರುಗಿದೆ.
ನಗರದಿಂದ ತಾಲೂಕಿನ ಹುಲಕಲ್ ಗ್ರಾಮಕ್ಕೆ ಟಂಟಂನಲ್ಲಿ ತೆರಳುತ್ತಿದ್ದ ಮಹಾಂತೇಶ ತಂದೆ ಕಳಸಪ್ಪ (24) ಮಾರ್ಗ ಮಧ್ಯೆ ಟಂಟಂ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಟಂಟಂ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ನಗರದಲ್ಲಿ ಕೆಲಸು ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿರುವಾಗ ದುರ್ಘಟನೆ ನಡೆದಿದೆ. ಈ ಕುರಿತು ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——————-
So sad