ಅಸಾನಿ ಚಂಡಮಾರುತಃ ಐದು ರಾಜ್ಯಗಳಲ್ಲಿ ಹೈ ಅಲರ್ಟ್
ಆಂದ್ರ, ಪಶ್ಚಿಮ ಬಂಗಾಲ, ಓಡಿಶಾ, ತಮಿಳುನಾಡು, ಕೇರಳಗಳಲ್ಲಿ ಭಾರಿ ಗಾಳಿ, ಮಳೆ
ವಿವಿ ಡೆಸ್ಕ್ಃ ಗಂಟೆಗೆ ಸುಮಾರು 105 ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿ ತಲುಪಿರುವ ಅಸಾನಿ ಚಂಡಮಾರುತ ಹಲವು ರಾಜ್ಯಗಳ ಜನ ಜೀವನ ಅಸ್ತವ್ಯಸ್ತ ಮಾಡುತ್ತಿದೆ.
ಆಂದ್ರಪ್ರದೇಶ, ಪಶ್ಚಿಮ ಬಂಗಾಲ, ಓಡಿಶಾ, ತಮಿಳುನಾಡು, ಕೇರಳಗಳಲ್ಲಿ ಭಾರಿ ಗಾಳಿ, ಮಳೆಯಾಗುತ್ತಿದ್ದು, ಗುರುವಾರವು ಇದು ಮುಂದುವರೆಯಲಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂದರು ನಗರಿಯಲ್ಲಿ ಚಂಡಮಾರುತ ಆರ್ಭಟ ಅಧಿಕವಾಗಿರುವ ಕಾರಣ, ವಿಶಾಖಪಟ್ಟಣಂ ಬಂದರಿನ ಕಾರ್ಯಚಟುವಟಿಕೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ವಿಶಾಖಪಟ್ಟಣಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಯು 23 ವಿಮಾನಗಳನ್ನು ರದ್ದು ಸಂಸ್ಥೆ ರದ್ದುಗೊಳಿಸಿದೆ ಎನ್ನಲಾಗಿದೆ.
ಆಂದ್ರಪ್ರದೇಶದಲ್ಲಿ ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಮತ್ತು ಹೈದರಾಬಾದ್ ಮೂಲಕ ವಿಶಾಖಪಟ್ಟಣಂ ನಿಲ್ದಾಣಕ್ಕೆ ಬಂದ ವಿಮಾನಗಳು ಲ್ಯಾಂಡಿಂಗ ಆಗಲು ಪ್ರತಿಕೂಲ ಪರಿಣಾಮ ಕಾರಣ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ಆ ಕಾರಣ ವಿಮಾನಗಳನ್ನು ವಾಪಾಸ್ ಕಳುಬಿಸಲಾಗಿದೆ. ಸದ್ಯ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ ಎನ್ನಲಾಗಿದೆ.