ಹೆದ್ದಾರಿ ಬದಿ ಹೊಸ ಬಾರ್ ರೆಸ್ಟೋರೆಂಟ್ಗೆ ಅಕ್ರಮ ಪರವಾನಿಗೆ – RC ಗೆ ದೂರು.!?
ಗೈಡ್ ಲೈನ್ ಗಾಳಿಗೆ ತೂರಿದ ಅಬಕಾರಿ ಅಧಿಕಾರಿಗಳು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು
ಹೆದ್ದಾರಿ ಬದಿ ಹೊಸ ಬಾರ್ ರೆಸ್ಟೋರೆಂಟ್ಗೆ ಅಕ್ರಮ ಪರವಾನಿಗೆ ದೂರು ಸಲ್ಲಿಕೆ
ಗೈಡ್ ಲೈನ್ ಗಾಳಿಗೆ ತೂರಿದ ಅಬಕಾರಿ ಅಧಿಕಾರಿಗಳು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು
yadgiri, ಶಹಾಪುರಃ ನಗರದ ಸುರಪುರ ಮಾರ್ಗದ ಬೀದರ -ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಬದಿ ನೂತನ ಬಾರ್ ರೆಸ್ಟೋರೆಂಟ್ (ಸಿಎಲ್-7) ನಿರ್ಮಾಣಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಗೈಡ್ ಲೈನ್ ಮೀರಿ ಪರವಾನಿಗೆ ನೀಡಿದ್ದು, ಇದು ಕಾನೂನು ಬಾಹಿರವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪರವಾನಿಗೆ ರದ್ದು ಪಡಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಉಪ ಆಯುಕ್ತ ಅಬಕಾರಿ ಇಲಾಖೆ ಯಾದಗಿರಿ ಮತ್ತು ಪ್ರಾದೇಶಿಕ ಆಯುಕ್ತರು ಕಲ್ಬುರ್ಗಿ ಇವರಿಗೆ ದೂರು ಸಲ್ಲಿಸಿದ್ದಾರೆ.
ಬೀದರ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಬದಿ ಆಸ್ತಿ ನಿವೇಶನ ಸಂಖ್ಯೆ ನಂ-135/10 ಮತ್ತು 135 (5) ರ ಜಾಗದಲ್ಲಿ ಅಬಕಾರಿ ಇಲಾಖೆಯ ಸನ್ನದು ಸಿಎಲ್-7 ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಮಂಜೂರಿ ನೀಡಿರುವದು ಕಾನೂನು ಬಾಹಿರವಾಗಿದೆ.
ಈ ಜಾಗದಲ್ಲಿ ಅಬಕಾರಿ ಗೈಡ್ ಲೈನ್ ಪ್ರಕಾರ ಸೂಚಿಸಿದ ಯಾವುದೇ ಸೌಲಭ್ಯಗಳು ಇಲ್ಲಿಲ್ಲ. ಪಾಕಿರ್ಂಗ್ ವ್ಯವಸ್ಥೆಗೆ ಜಾಗ ಕಾಯ್ದಿರಿಸಲಾಗಿಲ್ಲ. ವಸತಿ ಸೌಲಭ್ಯ ನಿಯಮನುಸಾರ ಕೋಣೆಗಳಿಲ್ಲ ಕೋಣೆಯ ಸುತ್ತಳತೆ ಸಮರ್ಪಕವಾಗಿಲ್ಲ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಿಂದಿ 40 ಮೀಟರ್ ದೂರ ಇರಬೇಕು ಅದು ಪಾಲಿಸಿಲ್ಲ. ಅಲ್ಲದೆ ಶೌಚಾಲಯ ವ್ಯವಸ್ಥೆ ಇಲ್ಲ. ಕೌಂಟರ್‍ಗೂ ಸಮರ್ಪಕ ಜಾಗವಿಲ್ಲ. ಟೀನ್ ಶೆಡ್ ಮೂಲಕ ಅಡುಗೆ ಮನೆ ತೋರಿಸಿದ್ದಾರೆ. ನಕಾಶೆಯಲ್ಲಿ ತೋರಿಸಿದ ಯಾವುದೆ ವ್ಯವಸ್ಥೆ ಇಲ್ಲಿಲ್ಲ.
ಅಲ್ಲದೆ ನಗರಸಭೆ ಪೌರಾಯುಕ್ತರು ಇದಕ್ಕೆ ನಿರಾಪೇಕ್ಷಣೆ ಪತ್ರ ನೀಡಿರುವದು ಕಾನೂನು ಬಾಹಿರವಾಗಿದೆ. ರಾಷ್ಟ್ರೀಯ ರಾಜ್ಯ ಹೆದ್ದಾರಿ ಪ್ರಾಧಿಕಾರ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ. ಹೆದ್ದಾರಿ ಪ್ರಾಧಿಕಾರದ ಅನುಮತಿಯೂ ನೀಡಲು ಬರುವದಿಲ್ಲ. ಹೀಗಾಗಿ ಅಬಕಾರಿ ಅಧಿಕಾರಿಗಳು ಗೈಡ್ ಲೈನ್ ಮೀರಿ ನೂತನ ಸನ್ನದು ಎಸ್‍ಎಲ್ -7 ಪರವಾನಿಗೆ ನೀಡಲು ಮುಂದಾಗಿರುವದು ಅಧಿಕಾರಿ ಮತ್ತು ಮಾಲೀಕರ ಮದ್ಯ ಒಡಂಬಡಿಕೆಯಾಗಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರಣ ಕೂಡಲೇ ಪ್ರಾದೇಶಿಕ ಆಯುಕ್ತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಹೊಸ ಸನ್ನದು ರದ್ದುಗೊಳಿಸುವ ಮೂಲಕ ಅಲ್ಲದೆ ಹಣದಾಸೆಗೆ ಪರವಾನಿಗೆ ನೀಡಿದ ಅಬಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಶಹಾಪುರದ ಬೀದರ -ಬೆಂಗಳೂರ ಹೆದ್ದಾರಿ ಬದಿ ನೂತನವಾಗಿ ನಿರ್ಮಿಸಲಾದ ಎಸ್.ಎಲ್.-7 ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಪ್ರಸ್ತಾವನೆ ಬಂದಿದೆ. ಇದು ಕಮಿಷನರ್ ಆಫೀಸಿಗೆ ಕಳಹಿಸಲಾಗಿದೆ. ಆದರೆ ಇನ್ನೂ ಅನುಮೋದನೆ ಆಗಿರುವದಿಲ್ಲ.
–ಮೋತಿಲಾಲ್. ಅಬಕಾರಿ ಜಿಲ್ಲಾಧಿಕಾರಿ ಯಾದಗಿರಿ.
ಶಹಾಪುರ ನಗರದ ಬೀದರ ಬೆಂಗಳೂರ ಹೆದ್ದಾರಿ ಬದಿ ಸುರಪುರ ಮಾರ್ಗದಲ್ಲಿ ನೂತನ ಬಾರ್ ಆಂಡ್ ರೆಸ್ಟೋರೆಂಟ್ ನಿರ್ಮಾಣಕ್ಕೆ ಕಟ್ಟಡ ನಿರ್ಮಿಸಿದ್ದು, ಈ ಕಟ್ಟಡ ಸರ್ಕಾರ ಗೈಡ್ ಲೈನ್ ಪ್ರಕಾರ ಯಾವೊಂದು ಸೌಲಭ್ಯವು ಇಲ್ಲಿಲ್ಲ. ಆದಾಗ್ಯು ಅಬಕಾರಿ ಅಧಿಕಾರಿಗಳು ದುಡ್ಡು ತಿಂದು ಪರವಾನಿಗೆ ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಸಿಎಲ್ -7 ಪರವಾನಿಗೆಯಡಿ ಬಾರ್ ಆರಂಭವಾಗಲಿದೆ. ಗೈಡ್ ಲೈನ್ ಪ್ರಕಾರ ಇಲ್ಲಿ ಯಾವುದೇ ಪಾರ್ಕಿಂಗ್ ಮತ್ತು ವಸತಿ ಗೃಹಗಳು, ಅಡುಗೆ ಮನೆ ಯಾವುದೇ ಪ್ರಮುಖ ನಿಯಮನುಸಾರ ಯಾವುದೇ ಸೌಲಭ್ಯ ಇರುವದಿಲ್ಲ. ಜಾಗವು ಇಕ್ಕಟ್ಟಾಗಿದೆ. ದೂರು ಕೊಡಲು ಹೋದಾಗ ಈಗಾಗಲೇ ಪರವಾನಿಗೆ ದೊರೆತಿದೆ. ಹೀಗೇನು ಮಾಡಲಾಗುವದಿಲ್ಲ ಎಂಬ ಹಾರಿಕೆ ಉತ್ತರವನ್ನು ಅಬಕಾರಿ ಅಧಿಕಾರಿಗಳು ನೀಡುತ್ತಿದ್ದಾರೆ.
-ಮಾನಪ್ಪ ಹಡಪದ. ಸಾಮಾಜಿಕ ಕಾರ್ಯಕರ್ತ ಶಹಾಪುರ.