ಪ್ರಮುಖ ಸುದ್ದಿಬಸವಭಕ್ತಿ
ಬಯಲು ಹನುಮಾನ್ ಮಂದಿರದಲ್ಲಿ ದೀಪೋತ್ಸವ
ಕಾರ್ತಿಕ ಮಾಸ ವಿಶೇಷ ಪೂಜೆ
ಶಹಾಪುರಃ ಬೆಟ್ಟದ ಬಯಲು ಹನುಮಾನ್ ಮಂದಿರದಲ್ಲಿ ಶನಿವಾರ ಕಾರ್ತಿಕ ಮಾಸ ಅಂಗವಾಗಿ ವಿಶೇಷ ಪೂಜೆ ಜರುಗಿತು. ಭಕ್ತ ಸಮೂಹದಿಂದ ದೀಪೋತ್ಸವ ಕಾರ್ಯ ನಡೆಯಿತು. ಹನುಮಾನ್ ಮಂದಿರ ಪ್ರದೇಶದಲ್ಲಿ ದೀಪಗಳನ್ನು ಬೆಳಗಿಸಲಾಯಿತು.
ಜಗಮಗಿಸುವ ದೀಪಗಳ ಮಧ್ಯ ಶ್ರದ್ಧಾ ಭಕ್ತಿಯಿಂದ ಭಕ್ತರು ಪೂಜೆ ನೆರವೇರಿಸಿದರು. ಹನುಮಾನ್ ಪ್ರತಿಮೆಗೆ ತುಳಸಿ ಮಾಲೆ, ವೀಲೇದ್ ಎಲೆ ಹಾರ, ಪುಷ್ಪಲಂಕಾರ ಮಾಡಲಾಗಿತ್ತು. ದೀಪೋತ್ಸವ ನಂತರ ದೇವಾಲಯಕ್ಕೆ ಬಂದ ಭಕ್ತರಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.