ನಕಲಿ ಬೇಡ ಜಂಗಮರಿಂದ ವಂಚನೆ, ಪರಿಶಿಷ್ಟರಿಗೆ ಅನ್ಯಾಯ ಬಂಜಾರ ಸಮಾಜ ಆಕ್ರೋಶ
ಪಿ.ರಾಜೀವ್ ಪ್ರತಿಕೃತಿ ದಹಿಸಿದವರ ಮೇಲೆ ದೂರು ದಾಖಲಿಸಲು ಆಗ್ರಹ
yadgiri, ಶಹಾಪುರಃ ಬೇಡ ಜಂಗಮರಿಗೆ ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವದನ್ನು ವಿರೋಧಿಸಿ ಮತ್ತು ಕುಡಚಿ ಶಾಸಕ ಪಿ.ರಾಜೀವ್ ಅವರ ಪ್ರತಿಕೃತಿ ದಹಿಸಿದ ಇಲ್ಲಿನ ಬೇಡ ಜಂಗಮ ಸಮಾಜದ ಪ್ರಮುಖರು ಮತ್ತು ಕೆಲ ಮಠಾಧೀಶರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿ ಭಾರತೀಯ ಬಂಜಾರ ಸಂಘಟನಾ ಸಮಿತಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ರಾಜ್ಯದಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿರುವದ ಕಾನೂನು ಬಾಹಿರವಾಗಿದೆ. ಜಂಗಮ, ಸವರ ಜಂಗಮ, ಚುರುಕ ಜಂಗಮ, ನಕ್ಕ ಜಂಗಮ, ಮುಸಲ ಈ ರೀತಿಯಾಗಿ ಪದಗಳು ಬರುತ್ತವೆ.
ಅದೇ ರೀತಿ ಕರ್ನಾಟಕದಲ್ಲಿ ಮಾಲಾ ದಾಸರು, ಮಾದಿಗ ದಾಸರು, ಮಾಲಾ ಜಂಗಮರು, ಮಾದಿಗ ಜಂಗಮರು ಎಂಬುವರು ನಿಜವಾದ ಬೇಡ ಜಂಗಮ ಪದದ ಅರ್ಥದ ಕಕ್ಷೆಯಲ್ಲಿ ಬರುತ್ತಾರೆ. ಇದನ್ನೆ ಕರ್ನಾಟಕದ ಮೇಲ್ವರ್ಗದ ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬೇಡ ಜಂಗಮರು ಇದರಲ್ಲಿ ಬರುತ್ತೇವೆ ಎಂದು ಬೇಡ ಜಂಗಮ ಹೆಸರಿನಲ್ಲಿ ಇಲ್ಲಿನ ಸ್ವಾಮೀಗಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವದು ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಈ ಕುರಿತು ಸಾರ್ವಜನಿಕವಾಗಿ ಕುಲಕುಂಷವಾಗಿ ಚರ್ಚಿಸಬೇಕಿದೆ. ಅದು ಬಿಟ್ಟು ನಕಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆಯುವದು ಸರಿಯಲ್ಲ. ಈ ಕುರಿತು ಕುಡಚಿ ಶಾಸಕ ಪಿ.ರಾಜೀವ್ ಅವರು, ಅಧಿವೇಶನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಆದಾಗ್ಯು ಇಲ್ಲಿನ ಜಂಗಮ ಸಮಾಜ ಅದನ್ನು ಖಂಡಿಸುವ ಮೂಲಕ ಶಾಸಕ ಪಿ.ರಾಜೀವ್ ಅವರ ಪ್ರತಿಕೃತಿ ದಹನ ಮಾಡಿರುವದು ಅಪರಾಧವಾಗಿದೆ. ಈ ಕೂಡಲೇ ಒಂದು ವಾರದ ಹಿಂದೆ ನಗರದ ಬಸವೇಶ್ವರ ವೃತ್ತದ ಕೆಲ ಮಠಾಧೀಶರು ಮತ್ತು ಜಂಗಮ ಸಮಾಜದ ಮುಖಂಡರು ಸಂಇವಧಾನ ಬದ್ಧ ಹಕ್ಕು ಕುರಿತು ಪ್ರತಿಪಾದಿಸಿದ್ದು, ಅವರ ಪ್ರತಿಕೃತಿ ದಹಿಸಿದ ಇಲ್ಲಿನ ಜಂಗಮ ಸಾಮಜದ ಎಲ್ಲರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಧರ್ಮ ನಾಯಕ ರಾಠೋಡ್, ಮಾನ್ಸಿಂಗ್ ಚವ್ಹಾಣ್, ಚಂದ್ರು, ತಿಪ್ಪಣ್ಣ ಚವ್ಹಾಣ, ಲಿಂಬಜಿ ಮಹಾರಾಜ್, ವಿಠಲ್ ಮಹಾರಾಜ್, ಶಿವಾನಂದ್ ರಾಠೋಡ್, ಅನೀಲ್ ರಾಠೋಡ್, ಬೇಬಿಬಾಯ್ ರಾಠೋಡ್ ಸೇರಿದಂತೆ ಇತರರಿದ್ದರು.