ಬೇಡ ಜಂಗಮರಿಗೆ ಅವಹೇಳನ ಕುಡಚಿ ಶಾಸಕರ ವಿರುದ್ಧ ಆಕ್ರೋಶ – ಪ್ರತಿಭಟನೆ
ಬೇಡ ಜಂಗಮ ಪ್ರಮಾಣ ಪತ್ರ ವಿರುದ್ಧ ಶಾಸಕ ಪಿ.ರಾಜೂ ಅಡ್ಡಗಾಲುಃ ಪ್ರತಿಭಟನೆ
yadgiri,ಶಹಾಪುರಃ ಬೇಡ ಜಂಗಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಪಿ.ರಾಜೂ ಅವರ ಹೇಳಿಕೆ ಖಂಡಿಸಿ ಇಲ್ಲಿನ ಬೇಡ ಜಂಗಮ ಸಮಾಜದವರಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಾಸಕ ರಾಜೂ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಮಲ್ಲಯ್ಯ ಸ್ವಾಮಿ ಇಟಗಿ, ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಬೇಡ ಜಂಗಮರಿಗೂ ಪಡೆಯುವ ಹಕ್ಕನ್ನು ಡಾ.ಅಂಬೇಡ್ಕರವರು ನೀಡಿದ್ದಾರೆ. ನಮ್ಮ ಹಕ್ಕನ್ನು ನಾವು ಪಡೆಯಲು ಹೋರಾಟ ನಡೆಸುತ್ತಿದ್ದೇವೆ. ಆದರೆ ಕುಡಚಿ ಶಾಸಕ ಪಿ.ರಾಜೂ ಜಂಗಮ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡುವದು ಸರಿಯಲ್ಲ ಎಂದರು.
ಬೆಳಗಾವಿಯ ಲೋಕಾಪುರ ಮಠದ ಮಹಾಂತ ಶಿವಾಚಾರ್ಯರು ಮಾತನಾಡಿ, ಬೇಡ ಜಂಗಮ ಮೀಸಲಾತಿ ಸಂವಿಧಾನ ಬದ್ದ ಹಕ್ಕಾಗಿದ್ದು. ಇದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಹೋರಾಟಕ್ಕೆ ಅಡ್ಡಗಾಲು ನಿಂತವರನ್ನು ಮೆಟ್ಟಿ ಜಂಗಮರು ಶಕ್ತಿಯುತ ಹೋರಾಟಕ್ಕಿಳಿಯುವ ತಾಖತ್ ಹೊಂದಿದ್ದಾರೆ. ಬೆಡ ಜಂಗಮ ಪ್ರಮಾಣ ನೀಡದಿದ್ದಲ್ಲಿ ಮುಂದೆ ಉಗ್ರ ಹೋರಾಟದ ಸ್ವರೂಪಗಳು ನಡೆಯುತ್ತವೆ ಎಂದು ಎಚ್ಚರಿಸಿದರು. ತಕ್ಷಣದಲ್ಲಿ ಶಾಸಕ ಪಿ.ರಾಜೂ ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮದ್ರಿಕಿಯ ಶೀಲವಂತೇಶ್ವರ ಶಿವಚಾರ್ಯರು, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಬಸಯ್ಯಸ್ವಾಮಿ ಬದ್ದೆಪಲ್ಲಿ ಮಾತನಾಡಿದರು. ಜ್ಯೋತಿರ್ಲಿಂಗ ಮಠದ ವಿಶ್ವರಾಧ್ಯ ದೇವರು, ಮಲ್ಲಿಕಾರ್ಜುನ ಹಿರೇಮಠ, ಚನ್ನಯ್ಯ ಹಿರೇಮಠ, ಗೌರಿಶಂಕರ ಹಿರೇಮಠ, ರೇವಣಸಿದ್ದಯ್ಯ ಡೆಂಗಿಮಠ, ಇತರರಿದ್ದರು.
ಬೇಡ ಜಂಗಮರ ವಿರುದ್ಧ ಅವಹೇಳನಕಾರಿ ಮಾತನಾಡಿದ ಕುಡಚಿ ಶಾಸಕ ಪಿ.ರಾಜು ಅವರು ಬೇಡಜಂಗಮ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ದ ಸದನದಲ್ಲಿ ಚರ್ಚೆಗೆ ಮುಂದಾಗಿದ್ದು ಖಂಡನೀಯವಾಗಿದೆ. ಸಂವಿಧಾನ ಬದ್ಧ ಹಕ್ಕು ನೀಡುವಲ್ಲಿ ಅಧಿಕಾರಿಗಳಿಗೆ ಕುಡಚಿ ಶಾಸಕ ತೊಡಕಾಗಿದ್ದಾರೆ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲ ಜಂಗಮುರೆಲ್ಲರೂ ಕಡುಚಿ ಪ್ರವೇಶಿಸಿ ಅವರ ಮನೆ ಎದುರು ಪ್ರತಿಭಟನೆ ನಡೆಸುತ್ತೇವೆ.
-ಬಸವರಾಜ ಹಿರೇಮಠ. ಗೌರವಧ್ಯಕ್ಷರು, ರಾಜ್ಯ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ. ಬೆಂಗಳೂರ.