ಬಿಟ್ ಕಾಯಿನ್ಃ ಸಾಕ್ಷಿ ಇದ್ರೆ ಸರ್ಕಾರಕ್ಕೆ ಕೊಡಿ ಕಾಂಗ್ರೆಸ್ ಗೆ ಬೊಮ್ಮಾಯಿ ಸವಾಲ್

ಬಿಟ್ ಕಾಯಿನ್- ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆತಿದೆ.- ಬೊಮ್ಮಾಯಿ
ಬೆಂಗಳೂರಃ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳು ಮಾಡುವದು ಬಿಡಿ. ಒಂದು ಸುಳ್ಳನ್ನು ಸಾವಿರ ಸಲ ಹೇಳಿ ನಿಜ ಮಾಡುವ ವೃತ್ತಿ ಬೇಡ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಟ್ ಕಾಯಿನ್ ಪ್ರಕರಣ ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈ ಹಿಂದೆಯೇ ಇದೇ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿ ಶ್ರೀಕಿಯನ್ನು ಬಂಧಿಸಿ ಕೈ ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರ. ಈಗಲೂ ಕಾಂಗ್ರೆಸ್ ಹತ್ರ ಸಾಕ್ಷಿಗಳಿದ್ರೆ ಸರ್ಕಾರಕ್ಕೆ ಕೊಡಲಿ, ಅದು ಬಿಟ್ಟು ಅವರಿದ್ದಾರೆ ಇವರಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹಾರಿಸುವದು ಸರಿಯಲ್ಲ.
ಈ ಪ್ರಕರಣದಡಿ ಭಾಗಿಯಾಗಿರುವ ಯಾರೇ ಆಗಲಿ ಎಷ್ಟೆ ಪ್ರಭಾವಿಗಳಾಗಲಿ ಯಾರನ್ನು ಬಿಡುವದಿಲ್ಲ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್ 2016 ರಲ್ಲಿ ಬಿಟ್ ಕಾಯಿನ್ ಪ್ರಕರಣದಡಿ ಆರೋಪಿಯನ್ನು ಬಂಧಿಸಿ ಯಾವ ಕಾರಣಕ್ಕೆ ಬಿಟ್ಟರು ಎಂಬುದನ್ನು ಹೇಳಲಿ. ಅಂದೇ ಪ್ರಕರಣ ತನಿಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದರೆ ಪ್ರಸ್ತುತ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.