ಪ್ರಮುಖ ಸುದ್ದಿ

ಸಿಲಿಂಡರ್ ಪ್ರಕರಣಃ ಮೃತರ ಕುಟುಂಬಕ್ಕೆ ಪರಿಹಾರ ಚಕ್ ವಿತರಿಸಿದ ಸಿಎಂ

ಮೃತರನ್ನು ಹಿಂದಿರುಗಿಸಲಾಗಲ್ಲ, ಉಳಿದವರಿಗೆ ಸಹಕಾರ ಅಗತ್ಯ - ಬೊಮ್ಮಾಯಿ

ಮೃತರನ್ನು ಹಿಂದಿರುಗಿಸಲಾಗಲ್ಲ, ಉಳಿದವರಿಗೆ ಸಹಕಾರ ಅಗತ್ಯ – ಬೊಮ್ಮಾಯಿ

ಸಿಎಂ ಬೊಮ್ಮಾಯಿ ಅವರಿಂದ ಪರಿಹಾರ ಚಕ್ ವಿತರಣೆ ಹಾಗೂ ಸಾಂತ್ವನ ಕಾರ್ಯಕ್ರಮ

yadgiri, ಶಹಾಪುರಃ ಸಿಲಿಂಡರ್ ಸ್ಪೋಟದಿಂದ ಸುಮಾರು 15 ಜನ ಮೃತರಾಗಿದ್ದು, 10 ಜನರು ವಿವಿಧ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರನ್ನು ವಾಪಸ್ ಕರೆತರಲಾದೀತೇ.? ಇಲ್ಲ. ಇದನ್ನು ಮನಗಂಡು ಮೃತರ ಕುಟುಂಬಗಳಿಗೆ ಸರ್ಕಾರ ಎಲ್ಲ ಸಹಕಾರ ನೀಡಲಿದೆ. ಪ್ರತಿ ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ಚಕ್ ನೀಡುತ್ತಿದ್ದು, ಅಲ್ಲದೆ ಮೃತರು ಸೇರಿದಂತೆ 10 ಜನ ಗಾಯಾಳುಗಳ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸಹ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.24 ರಂದು ಸೀಮಂತ ಶುಭ ಸಮಾರಂಭವೊಂದರಲ್ಲಿ ನಡೆದಿದ್ದ ಸಿಲಿಂಡರ್ ಅನಿಲ ಸೋರಿಕೆಯಿಂದ ಉಂಟಾದ ಸಾವು ನೋವುಗಳ ಕುರಿತು ಮಾಹಿತಿ ಪಡೆದಿದ್ದು, ಒಟ್ಟು 25 ಜನ ಗಾಯಗೊಂಡಿದ್ದು, 15 ಜನ ಮೃತಪಟ್ಟಿದ್ದಾರೆ ಮತ್ತು 10 ಜನ ವಿವಿಧ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಅವಘಡ ಎಚ್ಚರಿಕೆಯ ಘಂಟೆಯಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆಯುವವರ ಬಿಲ್ ಸುಮಾರು 8 ಲಕ್ಷಕ್ಕೂ ಅಧಿಕ ಅನುದಾನ ನೀಡಲಾಗಿದೆ, ಇನ್ನೂ ಹೆಚ್ಚಿನ ಸಹಕಾರ ನೀಡಲಿದ್ದು, ನೌಕರಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಸಾದ್ಯವಾದಷ್ಟು ಪ್ರಯತ್ನಿಸುತ್ತೇನೆ.

ಅಲ್ಲದೆ ಸಿಲಿಂಡರ್ ಏಜೆನ್ಸಿ ಅವರಿಂದಲೂ ಸಮರ್ಪಕ ಪರಿಹಾರ ಹಣ ಒದಗಿಸಿ ಕೊಡಿಸುವುದಾಗಿ ತಿಳಿಸಿದರು. ಅಲ್ಲದೆ ಸೋಲಾಪುರ ಆಸ್ಪತ್ರೆಯಲ್ಲಿ ಒರ್ವ ಚಿಕಿತ್ಸೆ ಪಡೆದಿದ್ದು, ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಸುಮಾರು 4 ಲಕ್ಷ ಬಿಲ್ ಆಗಿದೆ ಎಂದು ತಿಳಿಸಿದ್ದು, ಅದನ್ನು ಸರ್ಕಾರದಿಂದಲೇ ಭರಿಸುವ ವ್ಯವಸ್ಥೆ ಮಾಡಿಸುವೆ ಎಂದರು, ಈ ಸಂದರ್ಭದದಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಂಸದ ರಾಜಾ ಅಮರೇಶ್ವರ ನಾಯಕ, ಕಲ್ಬುರ್ಗಿ ಸಂಸದ ಉಮೇಶ ಜಾಧವ್, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಎಂಎಲ್ಸಿ ಬಿ.ಜಿ.ಪಾಟೀಲ್, ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಮಾಜಿ ಸಚಿವ ಡಾ.ಮಾಲಕರಡ್ಡಿ ಇತರರಿದ್ದರು.

 

ಇಬ್ಬರಿಗೆ ಗ್ರೂಪ್ ‘ಡಿ’ ನೌಕರಿ

ಸಿಲಿಂಡರ್ ಪ್ರಕರಣದಲ್ಲಿ ಮೃತಪಟ್ಟ 15 ರಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಸುನೀಲ್ ಹಾಗೂ ಶಾಂತಮ್ಮ ಎಂಬುವರನ್ನು ಜಿಲ್ಲಾಡಳಿತ ಆರೊಗ್ಯ ಇಲಾಖೆಯಲ್ಲಿ ಗ್ರೂಪ್ ‘ಡಿ’ ನೌಕರಿ ನೀಡಲಾಗಿದೆ. ಇನ್ನೂ ಈ ದುರ್ಘಟನೆಯಲ್ಲಿ ಏನಾದರೂ ಸಹಾಯ ಸಹಕಾರ ನೀಡುವ ಅಗತ್ಯ ಬಿದ್ದಲ್ಲಿ ಸಹಾಯ ಸಹಕಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ದೋರನಹಳ್ಳಿ ಘಟನೆ ಇದೊಂದು ದೊಡ್ಡ ದುರಂತ, ನಡೆಯಬಾರದಾಗಿತ್ತು. ನಡೆದಿದೆ. ದುರ್ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ, ಯಾದಗಿರಿ, ಶಹಾಪುರ ಶಾಸಕರು, ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ ಸಹಾಯ ಸಹಕಾರ ನೀಡುವ ಕುರಿತು ಗಮನಕ್ಕೆ ತಂದರು. ತಕ್ಷಣಕ್ಕೆ 5 ಲಕ್ಷ ಪರಿಹಾರ ಘೋಷಿಸಲು ತಿಳಿಸಿದೆ. ಮೃತರಾದವರನ್ನು ಮರಳಿ ಕೊಡಿಸಲಾಗಲ್ಲ. ಆದರೆ ಇದ್ದವರಿಗಾದರೂ ಬೆಂಬಲಿಸೋಣ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಉಳಿದ ಅವರ ಕುಟುಂಬದವರಿಗೆ ಆಸರೆಯಾಗಿ ಎಲ್ಲಾ ರೀತಿಯ ಮನವಿಗೆ ಸೂಕ್ತ ಸಹಾಯ ಒದಗಿಸುವನಿಟ್ಟಿನಲ್ಲಿ ಪ್ರಯತ್ನಿಸುವೆ.

-ಬಸವರಾಜ ಬೊಮ್ಮಾಯಿ. ಮುಖ್ಯಮಂತ್ರಿ

Related Articles

Leave a Reply

Your email address will not be published. Required fields are marked *

Back to top button