ತಬಲಾ ವಾದಕ ಶರಣು ಗೋಗಿಗೆ ಚನ್ನಶ್ರೀ ಪ್ರಶಸ್ತಿ
yadgiri, ಶಹಾಪುರಃ ಚಿಂಚೋಳಿ ತಾಲೂಕಿನ ಪ್ರಸಿದ್ಧ ಹಾರಕೂಡ ಮಠ ಕೊಡಮಾಡುವ ಚನ್ನಶ್ರೀ ಪ್ರಶಸ್ತಿಗೆ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಕಲಾವಿದ, ತಬಲಾ ವಾದಕ ಶರಣು ಗೋಗಿ ಆಯ್ಕೆಯಾಗಿದ್ದು, ಮಾರ್ಚ್ 12 ರಂದು ನಡೆಯಲಿರುವ ಹಾರಕೂಡದ ಶ್ರೀ ಚನ್ನಬಸವ ಶಿವಯೋಗಿಗಳ 71 ನೇ ಜಾತ್ರಾ ಮಹೋತ್ಸವದಲ್ಲಿ ಪ್ರಶಸ್ತಿಯನ್ನು ಚನ್ನವೀರ ಶಿವಾಚಾರ್ಯರು ಪ್ರಧಾನ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಶಸ್ತಿಯು 5 ಗ್ರಾಂ ಚಿನ್ನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲಾವಿದ ಶರಣು ಗೋಗಿ ಉತ್ತಮ ಕಲಾವಿದನಾಗಿದ್ದು, ತಬಲ ವಾದ್ಯದಲ್ಲಿ ಸಾಕಷ್ಟು ಪ್ರತಿಭೆ ಹೊಂದಿದ್ದಾನೆ.