ಪ್ರಮುಖ ಸುದ್ದಿಬಸವಭಕ್ತಿ

ಸಗರಾದ್ರಿ ಮಡಿಲಲಿ ಚರಬಸವ ತಾತಾನ ಸಂಭ್ರಮದ ರಥೋತ್ಸವ

100 ನೇ ವರ್ಷದ ಸಂಭ್ರಮದ ರಥೋತ್ಸವ

ಸಗರಾದ್ರಿ ಮಡಿಲಲಿ ಚರಬಸವ ತಾತಾನ ಸಂಭ್ರಮದ ರಥೋತ್ಸವ

100 ನೇ ವರ್ಷದ ಸಂಭ್ರಮದ ರಥೋತ್ಸವ

yadgiri, ಶಹಾಪುರಃ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಜಾತ್ರೆ, ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಕು ಕವಿದಿತ್ತು. ಈ ವರ್ಷ ಇಲ್ಲಿನ ಸಗರನಾಡಿನ ಆರಾಧ್ಯ ದೈವ ಸಗರಾದ್ರಿ ಬೆಟ್ಟಗಳ ಮಧ್ಯದಲ್ಲಿ ನೆಲೆ ನಿಂತ ಶ್ರೀ ಚರಬಸವೇಶ್ವರರ 100 ನೇ ವರ್ಷದ ಮಹಾ ರಥೋತ್ಸವ ಅಸಂಖ್ಯಾತ ಭಕ್ತರ ಜಯಘೋಷ ಮಧ್ಯ ಬುಧವಾರ ಸಂಜೆ 6 ಗಂಟೆಗೆ ಸಂಭ್ರಮದಿಂದ ಜರುಗಿತು.

ಈ ಬಾರಿ ವಿಶೇಷವಾಗಿ ಚರಬಸವ ತಾತಾ ಹಲವಾರು ಗ್ರಾಮಗಳಲ್ಲಿ ನೆಲೆಸಿ ಅಲ್ಲಿನ ಜನರಿಗೆ ಉತ್ತಮ ಮಾರ್ಗದರ್ಶನ ನೀಡಿ, ಕಾಯಕ, ದಾಸೋಹ ತತ್ವ ಪ್ರತಿಪಾದಿಸಿದ್ದ, ಹಲವಾರು ಪವಾಡಗಳನ್ನು ಮೆರೆದಿದ್ದ ಚರಬಸವ ತಾತಾನ ಭಕ್ತರು ಆಯಾ ಗ್ರಾಮಗಳಿಂದ ತಾತಾನ ಬೆತ್ತ ಅಂದರೆ ಮಂತ್ರದಂಡವನ್ನು ಹೊತ್ತು ಮೆರವಣಿಗೆ, ಕಾಲ್ನಡಿಗೆ ಮೂಲಕ ರಥೋತ್ಸವಕ್ಕೆ ಆಗಮಿಸಿರುವದು ವಿಶೇಷವಾಗಿತ್ತು.

ಪ್ರಥಮವಾಗಿ ರಥೋತ್ಸವಕ್ಕೆ ಬಾಡಿಯಾಳ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರೆ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆಗೈದರು. ನಾಳೆಯಿಂದ ದೊಡ್ಡ ಪ್ರಮಾಣದಲ್ಲಿ ಜಾನುವಾರು ಜಾತ್ರೆ ಒಂದು ವಾರಗಳ ವರೆಗೆ ನಡೆಯಲಿದೆ. ಜಾತ್ರೆಗೆ ಬೇಕಾದ ಮೂಲ ಸೌಲಭ್ಯವನ್ನು ತಾಲೂಕು ಆಡಳಿತ ಕಲ್ಪಿಸಿದೆ.

Related Articles

Leave a Reply

Your email address will not be published. Required fields are marked *

Back to top button