ಶಹಾಪುರಃ ಚಿರತೆ ಪ್ರತ್ಯಕ್ಷ – ಬೈಕ್ ಸ್ಪೀಡ್ ಮಾಡಿದ ರಾಮಪ್ಪ, ಜನರಲ್ಲಿ ಆತಂಕ
ಸ್ಥಳ ಪರಿಶೀಲನೆಗೆ ತೆರಳಿದ ಅರಣ್ಯ ಅಧಿಕಾರಿಗಳು, ಜಾಗೃತರಾಗಿರಲು ಸೂಚನೆ
ಶಹಾಪುರಃ ತಾಲೂಕಿನ ರಾಜಾಪುರ ಗ್ರಾಮದಿಂದ ಗೋಗಿಗೆ ತೆರಳುತ್ತಿರುವ ವೇಳೆ ಮಾರ್ಗ ಮಧ್ಯ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ರಾಮಣ್ಣ ಎಂಬಾತ ಗಾಬರಿಗೊಂಡು ಹಾಗೇ ಬೈಕ್‍ನ್ನು ಫಾಸ್ಟ್‍ಆಗಿ ಓಡಿಸಿಕೊಂಡು ಪಾರಾಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಗ್ರಾಮಸ್ಥರಿಗೆ ತಿಳಿಸಿದ ಆತ, ಜನರು ಆತಂಕಕ್ಕೊಳಗಾಗಿದ್ದು, ಉಪ ವಲಯ ಅರಣ್ಯ ಅಧಿಕಾರಿ ಐ.ಬಿ.ಹೂಗಾರ ಅವರ ಗಮನಕ್ಕೆ ತರಲಾಗಿದೆ. ಗ್ರಾಮಸ್ಥರ ಮಾಹಿತಿ ಪಡೆದುಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಹೂಗಾರ ಅವರು, ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ಪ್ರತ್ಯಕ್ಯದರ್ಶಿಯನ್ನು ಕರೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರತ್ಯಕ್ಷದರ್ಶಿಯು ಚಿರತೆ ರಸ್ತೆ ಮೇಲಿಂದ ಸಮೀಪದ ಬಡೇಸಾಬ ಮಡ್ಡಿ ಕಡೆ ಹೋಗಿದೆ ಎಂದು ತಿಳಿಸಿದ್ದಾನೆ. ಮಾಹಿತಿಯಂತೆ ಅರಣ್ಯ ಅಧಿಕಾರಿಗಳ ತಂಡ ಆ ಪ್ರದೇಶ ಅನುಸರಿಸಿ ಚಿರತೆ ಹೆಜ್ಜೆಗಳನ್ನು ಹುಡುಕಿದರು. ಆದರೆ ಯಾವುದೆ ಸಮರ್ಪಕ ಸಾಕ್ಷಿ ದೊರೆಯದ ಕಾರಣ ಅವರು ಯಾವುದೇ ಕಾರಣಕ್ಕೂ, ಹೊಲ, ಜಮೀನುಗಳಿಗೆ ತೆರಳುವಾಗ ಒಬ್ಬೊಬ್ಬರೇ ಹೋಗಬೇಡಿ ಮೂರು ನಾಲ್ಕು ಜನ ಸೇರಿಕೊಂಡು ಹೋಗಿ. ಹೊಲಕ್ಕೆ ನೀರು ಬಿಡಲು ರಾತ್ರಿ ಸಮಯದಲ್ಲಿ ಒಬ್ಬರೇ ತೆರಳಬೇಡಿ ಎಂದು ಸೂಚನೆ ನೀಡಿದ್ದಾರೆ.
ಎಲ್ಲೂ ಕೆಸರು ಆಗಿರದ ಕಾರಣ ಹೆಜ್ಜೆ ಗುರುತುಗಳು ಬಲವಾಗಿ ಕಂಡು ಬಂದಿಲ್ಲ. ಆದಾಗ್ಯು ನಿರ್ಲಕ್ಷವಹಿಸದೆ ಜನರು ಜಾಗೃತರಾಗಿ ಇರಬೇಕು. ಹೆಜ್ಜೆ ಗುರುತುಗಳು ಕಂಡು ಬಂದಿಲ್ಲ. ಆದಾಗ್ಯು ಜನರ ಎಚ್ಚರಿಕೆವಹಿಸಬೇಕು. ಪ್ರತ್ಯಕ್ಷದರ್ಶಿ ನಿಖರವಾಗಿ ನೋಡಿದ್ದೇನೆ. ಭಯಗೊಂಡ ಬೈಕ್ ಸ್ಪೀಡ್ ಮಾಡಿದೆ ಎಂದಿದ್ದಾರೆ. ವದಂತಿಗೆ ಜನ ಭಯಗೊಂಡಿದ್ದಾರೆ. ಆದರೆ ಇದುವರೆಗೂ ಈ ಭಾಗದಲ್ಲಿ ಯಾವುದೇ ಕುರಿಗಳಾಗಲಿ ಮನುಷ್ಯರ ಮೇಲಾಗಿ ದಾಳಿ ನಡೆಸಿದ ಉದಾಹರಣೆಗಳಿಲ್ಲ. ನಿರ್ಲಕ್ಷವಹಿಸದೇ ಮೂರು ನಾಲ್ಕು ಜನ ಸೇರಿ ಜಮೀನು ಕೆಲಸಕ್ಕೆ ತೆರಳಬೇಕು. ಆದಾಷ್ಟು ಮುನ್ನೆಚರಿಕೆವಹಿಸಬೇಕು.
-ಐ.ಬಿ.ಹೂಗಾರ. ಉಪ ವಲುಯ ಅರಣ್ಯಾಧಿಕಾರಿ. ಭೀ.ಗುಡಿ.