ಪ್ರಮುಖ ಸುದ್ದಿ
ಕಾಂಗ್ರೆಸ್ ಶುದ್ಧ ಹಸ್ತದವರು ಯಾತ್ರೆ ಮಾಡ್ತಾರಂತೆ – ಸಿಎಂ ವ್ಯಂಗ್ಯ
ಸಂತೋಷ ಪ್ರಕರಣ ತನಿಕೆಗೆ ಚುರುಕು- ಸಿಎಂ
ಕಾಂಗ್ರೆಸ್ ಶುದ್ಧ ಹಸ್ತದವರು ಯಾತ್ರೆಗೆ ಮಾಡ್ತಾರಂತೆ – ಸಿಎಂ ವ್ಯಂಗ್ಯ
ಹೊಸಪೇಟೆಃ ಗುತ್ತಿಗೆದಾರ ಸಂತೋಷ ಪ್ರಕರಣ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಹಿಡಿದು ಕಾಂಗ್ರೆಸ್ ನವರು ಶುದ್ಧ ಹಸ್ತರು ಯಾತ್ರೆ ಹೋಗ್ತಾರಂತೆ. ಅವರ ತಿಜೋರಿಯಲ್ಲಿ ಭ್ರಷ್ಟಾಚಾರದ ಎಷ್ಟು ಅಸ್ತಿಗಳಿವೆ ಗೊತ್ತಾ.? ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ನ ಆಗಿನ ಗೃಹ ಸಚಿವ ಜಾರ್ಜ್ ವಿರುದ್ಧ ಡಿವೈಎಸ್ಪಿ ಪ್ರಕರಣದಲ್ಲಿ ಸಮರ್ಪಕ ಸಾಕ್ಷಿ ಆಧಾರ, ವಿಡಿಯೋ ಸೇರಿದಂತೆ ನಾನಾ ದಾಖಲೆಗಳಿದ್ದವು.
ಆದಾಗ್ಯು ರಾಜೀನಾಮೆ ಕೊಡಲು ಇಡಿ ರಾಜ್ಯ ಎದ್ದು ನಿಲ್ಲ ಬೇಕಾಯಿತು. ಸಂತೋಷ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ವಿಲ್ಲ. ಪ್ರಾಮಾಣಿಕ ತನಿಖೆ ಕಾರ್ಯ ಚುರುಕು ನಡೆದಿದೆ. ಶೀಘ್ರದಲ್ಲಿ ಈಶ್ವರಪ್ಪನವರು ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ. ಅವರೇಳಿದೆ ಆಡಳಿತ ನಡೆಸಬೆಕಾ.? ಅವರೇ ವಕೀಲರಾಗ್ತಾರೆ, ಅವರೇ ಜಡ್ಜ್ ಆಗ್ತಾರೆ ಎಂದು ದೂರಿದರು.