ಶಹಾಪುರಃ 8 ಗುಡಿಸಲುಗಳಿಗೆ ಬೆಂಕಿ ಅಪಾರ ನಷ್ಟ
ಸಚಿವ ದರ್ಶನಾಪುರ ಭೇಟಿ-ತಲಾ ೧೦ ಸಾವಿರ ಸಹಾಯಧನ ವಿತರಣೆ
ಮಡ್ನಾಳಃ 8 ಗುಡಿಸಲುಗಳಿಗೆ ಬೆಂಕಿ ಅಪಾರ ನಷ್ಟ
ಸಚಿವ ದರ್ಶನಾಪುರ ಭೇಟಿ-ತಲಾ ೧೦ ಸಾವಿರ ಸಹಾಯಧನ ವಿತರಣೆ
ಶಹಾಪುರಃ ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು ೮ ಗುಡಿಸಲುಗಳು ಬೆಂಕಿಗಾಹುತಿಯಾಗಿ ಅಪಾರ ಪ್ರಮಾಣ ನಷ್ಟವಾದ ಘಟನೆ ತಾಲೂಕಿನ ಮಡ್ನಾಳ ಸಮೀಪ ಆಂದ್ರ ಕ್ಯಾಂಪಿನಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಿಡಿ ಹೊತ್ತಿರುವ ಶಂಕೆ ವ್ಯಕ್ತವಾಗಿದ್ದು, ಗುಡಿಸಲುಗಳಲ್ಲಿದ್ದ ಅಡುಗೆ ಸಿಲಿಂಡರ್ ಬೆಂಕಿಗೆ ಸಿಡಿದು ಬೀಳುವದನ್ನು ಕಂಡು ಹೊಲದಲ್ಲಿದ್ದ ರೈತಾಪಿ ಜನರು ಗಾಬರಿಗೊಂಡಿದ್ದಾರೆ. ನೋಡು ನೋಡುತ್ತಿದ್ದಂತೆ ಸುಮಾರು ೮ ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಅದೃಷ್ಟವಶಾತ್ ಜೋಪಡಿಯಲ್ಲಿ ಯಾರೊಬ್ಬರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲಿನಲ್ಲಿ ಇಟ್ಟಿದ್ದ ಟಿ.ವಿ., ಫ್ರಿಡ್ಜ್, ದವಸ ಧಾನ್ಯ ಸೇರಿದಂತೆ ಬೈಕ್ ಮತ್ತು ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ.
ದರ್ಶನಾಪುರ ಭೇಟಿಃ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪರಿಶೀಲನೆ ನಡೆಸಿದರು. ನಂತರ ನೊಂದವರಿಗೆ ತಲಾ ೧೦ ಸಾವಿರ ವಯಕ್ತಿಕ ಸಹಾಯ ಧನ ನೀಡಿ ಸಾಂತ್ವನ ಹೇಳಿದರು. ಇದೇ ವೇಳೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಧನ ಒದಗಿಸುವ ಭರವಸೆ ನೀಡಿದರು. ತಹಸೀಲ್ದಾರ ಉಮಾಕಾಂರ ಹಳ್ಳೆ, ಸಿಪಿಐ ವಿಜಯಕುಮಾರ ಬಿರೆದಾರ ಸೇರಿದಂತೆ ಅಧಿಕಾರಿಗಳು ಇದ್ದರು.
ಘಟನೆ ಕಂಡು ಗಾಬರಿಗೊಂಡ ಶಿರವಾಳ
ಶಹಾಪುರಃ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಸ್ವಗ್ರಾಮ ಶಿರವಾಳಕ್ಕೆ ತೆರಳುತ್ತಿದ್ದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಗಾಬರಿಗೊಂಡು ಸೇರಿದ್ದ ಜನರನ್ನು ದೂರ ತೆರಳಲು ಸೂಚಿಸಿದ್ದಾರೆ ಅಷ್ಟರಲ್ಲಿ ಮಾಜಿ ಶಾಸಕರ ಸಮೀಪವೇ ಸಿಲೆಂಡರ್‌ವೊಂದು ಸಿಡಿದು ಬಂದು ಬಿದ್ದಿದೆ ಗಾಬರಿಗೊಂಡ ಎಲ್ಲರೂ ರಸ್ತೆ ಇಳಿದು ಸಮೀಪದ ಜಮೀನಿನಡಿ ಓಡಿ ಹೋಗಿದ್ದಾರೆ. ತಕ್ಷಣಕ್ಕೆ ಜನರನ್ನು ಅಲ್ಲಿಂದ ದೂರ ಹೋಗುವಂತೆ ಕೂಗಿದ್ದಾರೆ. ಸಿಲೆಂಡರ್ ಸಿಡಿಯುತ್ತಿವೆ ದೂರ ಓಡಿ ಎಂದು ಕೂಗಾಡಿದ್ದು, ಗಾಬರಿಗೊಂಡ ಘಟನೆ ಪತ್ರಿಕೆಗೆ ವಿವರಿಸಿದರು.
ಅಲ್ಲದೆ ಅಗ್ನಿ ಶಾಮಕ ದಳಕ್ಕೆ ಫೋನಾಯಿಸಿ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಸಂಬAಧಿಸಿದ ಅಧಿಕಾರಿಗಳಿಗೆ ಫೋನಾಯಿಸಿರುವ ಕುರಿತು ತಿಳಿಸಿದರು. ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ ಮೇಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ನೊಂದವರಿಗೆ ಸಾಂತ್ವನ ತಿಳಿಸಿದ್ದಾರೆ.
ಬೈಕ್, ಟಿವಿ, ಆಹಾರ ಧಾನ್ಯ, ದುಡ್ಡು ಸುಟ್ಟು ಕರಕಲಾಗಿರುವದು ಕಂಡು ಮರಗಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಿರವಾಳ ತಿಳಿಸಿದ್ದಾರೆ.