ನಿಮ್ಮ ಕೈಯಲ್ಲೇನಿದೆ.? ಅದ್ಭುತ ಕಥೆ ಓದಿ
ಪರ್ವಾನ್ ಹೇಳಿದ ಕಥೆ
ಬ್ಯಾಂಕಿನ ಕಾರ್ಮಿಕರ ಸಂಘಟನೆಯಲ್ಲಿ ದಿ. ಪರ್ವಾನ್ ರ ಹೆಸರು ಚಿರಸ್ಥಾಯಿಯಾದದ್ದು. ಅವರು ಮರಣ ಶಯ್ಕೆಯಲ್ಲಿದ್ದಾಗ ಹಿರಿಯ ಮಿತ್ರರೆಲ್ಲಾ ಕಾತುರದಿಂದ ಸುತ್ತುವರಿದಿದ್ದರು. ಸಂಸ್ಥೆಯ ಬೆನ್ನೆಲುಬಾದ ಪರ್ವಾನ್ ಹೋದರೆ ಮುಂದೇನು ಗತಿ? ಎಂಬುದು ಅವರ ಚಿಂತೆ. ಅಂತೆಯೇ ಹೇಳಿದರು, ಕಾಮ್ರಡ್ ನಿಮ್ಮ ನೆಚ್ಚಿನ ಸಂಸ್ಥೆಯ ಗತಿಯೇನು ಮುಂದೆ. ಆ ಸ್ಥಿತಿಯಲ್ಲೂ ನಸುನಕ್ಕ ಪರ್ವಾನ್ ಒಂದು ಕಥೆಯನ್ನು ಹೇಳಿದರು.
ಕುತೂಹಲಿಯೊಬ್ಬನು ಜ್ಯೋತಿಷಿಯೊಬ್ಬನ ಸತ್ಯತೆಯನ್ನು ಪರೀಕ್ಷಿಸಲು ಒಂದು ಉಪಾಯ ಹೂಡಿದ. ತನ್ನ ಮುಷ್ಟಿಯಲ್ಲಿ ಒಂದು ಸಣ್ಣ ಹಕ್ಕಿಯನ್ನು ಹಿಡಿದು ಜ್ಯೋತಿಷಿಯ ಮಂದೆ ಕೇಳಿದ. ನನ್ನ ಮುಷ್ಟಿಯಲ್ಲಿ ಏನಿದೆ? ಜ್ಯೋತಿಷಿ ಹೇಳಿದ ಅದೊಂದು ಹಕ್ಕಿ ಎಂದು. ಆ ವ್ಯಕ್ತಿಗೆ ಆಶ್ಚರ್ಯವಾಯಿತು.
ಮತ್ತೆ ಕೇಳಿದ ಅದರ ಬಣ್ಣವೇನು? ಜ್ಯೋತಿಷಿ ಹೇಳಿದ ಕಪ್ಪು ಎಂದು. ಆ ವ್ಯಕ್ತಿಗೆ ಮತ್ತಷ್ಟು ಆಶ್ಚರ್ಯವಾಯಿತು, ಆದರೂ ಸೋಲದೆ ಅದು ಹೆಣ್ಣೆ ಗಂಡೋ? ಶಾಂತವಾಗಿ ಜ್ಯೋತಿಷಿ ಹೇಳಿದ ಹೆಣ್ಣು. ಆ ವ್ಯಕ್ತಿಗೆ ನಾನು ಸೋಲುತ್ತಿದ್ದೇನೆಂದು ಅರಿವಾಯಿತು.
ಅದನ್ನು ತೋರಿಸಿಕೊಳ್ಳದೆ, ಈ ಸಾರಿ ಜ್ಯೋತಿಷಿಯನ್ನು ಸೋಲಿಸಿಯೇ ತೀರುತ್ತೇನೆ ಎಂದುಕೊಂಡು, ಇದು ಬದುಕಿದೆಯೋ ಅಥವಾ ಸತ್ತಿದೆಯೋ ಎಂದು ಕೇಳಿದನು. ಅವನ ವಿಚಾರ ಹೀಗಿತ್ತು. ಒಂದು ವೇಳೆ ಜ್ಯೋತಿಷಿ ಬದುಕಿದೆ ಎಂದರೆ ಮುಷ್ಟಿಯನ್ನು ಬಿಗಿಮಾಡಿ ಹಕ್ಕಿಯನ್ನು ಸಾಯಿಸುವುದು ಅಥವಾ ಸತ್ತಿದೆ ಎಂದರೆ ಹಾಗೆ ಬಿಟ್ಟು ತೋರಿಸುವುದು ಎಂದು ಆತನ ಯೋಚನೆ ಆಗಿತ್ತು.
ಆದರೆ, ಸ್ಥಿತಪ್ರಜ್ಞನಂತೆ ಜ್ಯೋತಿಷಿ ಹೇಳಿದ “ಅದು ನಿನ್ನ ಕೈಲ್ಲಿದೆ” ಕೊಲ್ಲುವುದು ಬದುಕಿಸುವುದು ನಿನಗೆ ಬಿಟ್ಟಿದ್ದು, ಹಾಗೆಯೇ ಈ ಸಂಸ್ಥೆಯನ್ನು ಅಳಿಸುವುದು ಅಥವಾ ಬೆಳಸುವುದು ನಿಮ್ಮ ಕರ್ತವ್ಯ ಶಕ್ತಿಗೆ ಬಿಟ್ಟಿದ್ದು ಎಂದು ಹೇಳಿ ಕಣ್ಣುಮುಚ್ಚಿದರು ಪರ್ವಾನ್.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.