ದಿನಕ್ಕೊಂದು ಕಥೆ
ಕುರುಪಿ ಯಾರು ?
ಅಷ್ಟಾವಕ್ರನ ಹೆಸರೇ ಹೇಳುವಂತೆ ದೇಹದಲ್ಲಿ 8 ವಕ್ರತೆಗಳಿದ್ದವು. ಆತನ ದೇಹ ಅತ್ಯಂತ ಕುರೂಪಿಯಾಗಿತ್ತು. ಆದರೆ ಪಾಂಡಿತ್ಯ ಮಾತ್ರ ಅಸಾಧಾರಣ. ಇದನ್ನು ಕೇಳಿದ ಪಂಡಿತ ಜನಕರಾಜ ತನ್ನೊಂದಿಗೆ ವಾದಕ್ಕೆ ಆಹ್ವಾನಿಸಿದ.
ಆಗ ಅಷ್ಟಾವಕ್ರನಿಗೆ ಕೇವಲ 12 ವರ್ಷ. ಆತ ಆಸ್ಥಾನಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿದ್ದ ಪಂಡಿತ ಪಾಮರರೆಲ್ಲ ಅವನ ಕುರೂಪವನ್ನು ನೋಡಿ ಜೋರಾಗಿ ನಗಲಾರಂಭಿಸಿದರು. ಇದನ್ನು ನೋಡಿದ ಅಷ್ಟಾವಕ್ರನೂ ಜೋರಾಗಿ ನಗತೊಡಗಿದ.
ಈಗ ರಾಜ ಪ್ರಶ್ನಿಸಿದ, ನನಗೆ ಆಸ್ಥಾನಿಕರು ಏಕೆ ನಗುತ್ತಿದ್ದಾರೆಂದು ತಿಳಿಯಿತು. ಆದರೆ ನೀನೇಕೆ ನಗುತ್ತಿರುವೆ ಎಂದು ತಿಳಿಯಲಿಲ್ಲ ? ಅಷ್ಟಾವಕ್ರ ಉತ್ತರಿಸಿದ. ಅವರೆಲ್ಲ ನನ್ನ ದೈಹಿಕ ವಿರೂಪವನ್ನು ನೋಡಿ ನಗುತ್ತಿದ್ದಾರೆ. ನಾನವರ ಮಾನಸಿಕ ಕುರೂಪವನ್ನು ನೋಡಿ ನಗುತ್ತಿದ್ದೇನೆ ಎಂದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.