ದಿನಕ್ಕೊಂದು ಕಥೆ
ಅನುಭವಿಸು – ಆನಂದಿಸು
ಇಬ್ಬರು ಆದರ್ಶ ದಂಪತಿಗಳು. ಒಂದು ದಿನ ಪತಿಯು “ನಾನ ಸಾಗರವನ್ನು ನೋಡಿ ಬರುತ್ತೇನೆ” ಎಂದು ಸತಿಗೆ ಹೇಳಿ ಹೋದ. ಅದು ಹಳೆಯ ಕಾಲ. ಹಲವು ದಿನಗಳವರೆಗೆ ನಡೆದು ಆತ ಸುವಿಶಾಲವಾದ ಸಾಗರ ತಲುಪಿದ. ಸಾಗರದ ಭವ್ಯತೆ ದಿವ್ಯತೆ ಕಂಡು ಸಂತಸಗೊಂಡು ಮರಳಿದ ಮನೆಯಲ್ಲಿ ಸತಿಯು ಕುತೂಹಲದಿಂದ ಪತಿಯ ದಾರಿ ಕಾಯುತ್ತಿದ್ದಳು. ಪತಿಯ ಮನೆಗೆ ಬರುವುದೇ ತಡ, ಸತಿಯು ಕೇಳಿದಳು.
“ನೀವು ಸಾಗರವನ್ನು ನೋಡಿ ಬಂದಿರಾ ?” ‘ಹೌದು’ ಎಂದ ಪತಿ. ‘”ಆ ಸಾಗರದ ಆಳ, ಅಗಲ ವಿಸ್ತಾರವನ್ನೆಲ್ಲ ನನಗೆ ವಿವರಿಸಿ ಹೇಳಿರಿ” ಎಂದಳು ಸತಿ. ಅದು ಯಾವುದು ನನಗೆ ಗೊತ್ತಿಲ್ಲ ಎಂದ ಪತಿ. “ಹಾಗಾದರೆ ನೀವು ಅಷ್ಟು ದೂರದ ಸಾಗರ ಹೋದದ್ದಾದರೂ ಏತಕ್ಕೆ ??” ಎಂದು ಸತಿಯು ಅಚ್ಚರಿಯಿಂದ ಕೇಳಿದಳು.
“ನಾನು ಸಾಗರಕ್ಕೆ ಹೋದದ್ದು ಅದನ್ನು ಅಳೆಯಲಿಕ್ಕಲ್ಲ, ಅನುಭವಿಸಲಿಕ್ಕೆ, ಆನಂದಿಸಲಿಕ್ಕೆ ಎಂದು ಪತಿ ಹೇಳಿದ. ಹಾಗೇ ನಾವು ಆ ಮಹಾದೇವನನ್ನು ಅನುಭವಿಸಿ ಆನಂದಿಸಬೇಕೇ ವಿನಾ ಕೇವಲ ವರ್ಣಿಸುವುದಲ್ಲ. ತರ್ಕ ವಿತಕ ಮಾಡುವುದಲ್ಲ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.