ದಿನಕ್ಕೊಂದು ಕಥೆ
ಅರಿವಿನ ಕಣ್ಣು ತೆರೆದಿತ್ತು ಆದರೆ ಕಾಲ ಮಿಂಚಿ ಹೋಗಿತ್ತು
ಒಬ್ಬ ಆಗರ್ಭ ಶ್ರೀಮಂತ ವ್ಯಕ್ತಿ. ತನ್ನ ವಯೋಸಹಜ ಕಾಯಿಲೆಗಳಿಂದ ನಿಧನ ಹೊಂದಿ ಶರೀರದಲ್ಲಿರುವ ಅಮರಜ್ಯೋತಿ ಆತ್ಮವು ಬೇರ್ಪಟ್ಟು ದೇವಲೋಕಕ್ಕೆ ಸೇರ್ಪಡೆಯಾಗಿತ್ತು.
ಅಲ್ಲಿನ ದೇವರು ಭೂಮಂಡಲದಿಂದ ಬಂದ ಆತ್ಮಕ್ಕೆ ಭೂಮಂಡಲದಲ್ಲಿ ಏನೇನು ಮಾಡಿದೆ ? ಎಂದು ಪ್ರಶ್ನಿಸುತ್ತಾನೆ. ಆತ್ಮವು ಒಂದು ಸಾವಿರ ಎಕರೆ ಜಮೀನು ಸಂಪಾದನೆ ಮಾಡಿದೆ, ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದೆ, ಹತ್ತಾರು ಕಿಲೋ ಬಂಗಾರ ಮತ್ತು ಬೆಳ್ಳಿಯ ನಾಣ್ಯ ಒಡವೆಗಳನ್ನು ಸಂಪಾದನೆ ಮಾಡಿದೆ, ಅಧಿಕಾರ, ಗೌರವ, ಅಂತಸ್ತು ಕೀರ್ತಿಯನ್ನು ಸಂಪಾದಿಸಿದೆ ಎಂದು ಉತ್ತರ ನೀಡಿತು.
ಮತ್ತೆ ಏನೇನು ಮಾಡಿದೆ ಎಂದು ದೇವರು ಪ್ರಶ್ನಿಸಿದ ? ಧರ್ಮ, ಜಾತಿ, ಪಂಗಡ, ಹಲವಾರು ವರ್ಣಗಳನ್ನು ಸೃಷ್ಟಿ ಮಾಡಿ ಅವುಗಳನ್ನು ಆನಂದಿಸಿದ್ದೇನೆ ಎಂದು ಹೇಳಿತು.
ನೀನು ಸಂಪಾದಿಸಿದ ಎಲ್ಲವುಗಳು ಈಗ ಎಲ್ಲಿವೆ ಎಂದು ದೇವರು ಪ್ರಶ್ನಿಸಿದ ? ಆತ್ಮವು ಅವುಗಳೆಲ್ಲವೂ ಭೂಮಿಯ ಮೇಲಿವೆ ಎಂದಿತು ಮತ್ತು ಅವುಗಳನ್ನು ನನ್ನ ಸಂಬಂಧಿಕರು ಅನುಭವಿಸುತ್ತಿದ್ದಾರೆ ಎಂದು ಹೇಳಿತು.
ದೇವರು ನಕ್ಕು, ನಾನು ನಿರ್ಮಿಸಿದ ಭೂಮಂಡಲದ ನಿಸರ್ಗದ ಸೌಂದರ್ಯವನ್ನು ನೋಡಿ ಆನಂದಿಸಿ ಅನುಭವಿಸಲಿಲ್ಲ, ನದಿ ಸರೋವರಗಳು, ಗಿಡಮರಗಳು, ಹಿಮಾಲಯ ಪರ್ವತ ಶ್ರೇಣಿಗಳು, ನಿತ್ಯಹರಿದ್ವರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಗಳು, ಪ್ರಾಣಿ ಪಕ್ಷಿಗಳು, ಹೂಗಳು, ಸಾಧು, ಸಂತ, ಶರಣರ ಅನುಭಾವದ ಮಾತುಗಳು, ಸೂರ್ಯ, ಚಂದ್ರ ಮತ್ತು ತಾರೆಗಳನ್ನು ನೀಡಿದೆ ಅವುಗಳನ್ನು ಗುರುತಿಸಲಿಲ್ಲ ನಿಜವಾದ ಸಂತೋಷ ಆನಂದವು ಅಲ್ಲಿಯೇ ಅಡಗಿತ್ತು ಎಂದು ಹೇಳಿದ.
ಆತ್ಮವು ದೇವರಲ್ಲಿ ಕ್ಷಮೆ ಕೇಳಿ, ಈಗ ನನಗೆ ಜ್ಞಾನೋದಯವಾಯಿತು ದೇವನೆ ಇನ್ನೊಮ್ಮೆ ನನಗೆ ನಿಮ್ಮ ಸುಂದರ ಪ್ರಕೃತಿ ಅಥವಾ ನಿಸರ್ಗವೆಂಬ ಉತ್ಸವದ ಭೂಮಂಡಲಕ್ಕೆ ಕಳುಹಿಸು ನಾನು ನಿಜವಾದ ಆನಂದವನ್ನು ಅನುಭವಿಸಿ ಬರುತ್ತೇನೆ ಎಂದಿತು.
ದೇವರು ನಿನ್ನ ಸರದಿಯ ಅವಧಿ ಮುಗಿದಿದೆ. ಜೊತೆಗೆ ಕಾಲವು ಮಿಂಚಿ ಹೋಗಿದೆ ಈಗ ಪಶ್ಚಾತಾಪ ಪಟ್ಟರೆ ಏನು ಪ್ರಯೋಜನವಿಲ್ಲ ಮತ್ತೆ ನೂರಾರು ವರುಷಗಳವರೆಗೆ ಕಾಯುತ್ತಿರು ಮತ್ತೆ ನಿನಗೆ ಭೂಮಂಡಲಕ್ಕೆ ಕಳುಹಿಸುತ್ತೇನೆ ಎಂದು ದೇವನು ಉತ್ತರಿಸಿದನು.
ನೀತಿ :– ಎಲ್ಲವುಗಳನ್ನು ಸಂಪಾದನೆ ಮಾಡೋಣ ಆದರೆ ದೇವರು ನಿರ್ಮಿಸಿದ ಪ್ರಕೃತಿ ಅಥವಾ ನಿಸರ್ಗದ ಸೌಂದರ್ಯದ ಉತ್ಸವವನ್ನು ಸಂತೋಷ ಹಾಗೂ ಆನಂದದಿಂದ ಅನುಭವಿಸೋಣ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.