ಕಥೆ
ಗೌರಿ ಮದುವೆಯಾದ ಯಾರವನು..?
ಸತ್ಯವೇ ದೇವರು
ಗೌರಿ ಬಹಳ ಸುಂದರಿ, ಬುದ್ಧಿವಂತೆ. ಗುಣವಂತೆ. ಆದರೂ ವಿವಾಹವಾಗಿಲ್ಲ. ಏಕೆಂದರೆ ಅವಳ ಬಲಹುಬ್ಬಿನ ಮೇಲೆ ಆಳವಾದ ಗಾಯದ ಕಲೆ ಇದೆ. ಒಮ್ಮೆ ಆ ಊರಿನ ರಾಜಕುಮಾರ ಆಕೆಯನ್ನು ಹೂದೋಟದಲ್ಲಿ ಕಂಡು ಮೋಹಿಸಿದ. ಗೌರಿ ಆತನನ್ನು ಮನೆಗೇ ಕರೆದಳು.
ತನ್ನ ತಲೆಗೂದಲು ಸರಿಸಿ ಗಾಯವನ್ನು ತೋರಿಸಿದಳು. ಇದು ಹ್ಯಾಗಾಯ್ತು ? ಎಂದ. ಆಕೆ “ಚಿಕ್ಕವಳಿದ್ದಾಗ ಅಜ್ಜನ ಮನೆಗೆಂದು ಹೋಗುವಾಗ ಮಾವಿನ ತೋಪಿನ ಮೂಲಕ ಹೋಗುವಾಗ ಮಾವಿನ ಹಣ್ಣಿಗೊಂದು ಹೊಡೆದ ಕಲ್ಲು ನನ್ನ ಹಣೆಗೆ ಬಂದು ಗಾಯ ಮಾಡಿತ್ತು” ಎಂದು ಹೇಳಿದಳು.
ಆಕೆ ಹೇಳುತ್ತಿದ್ದಂತೆಯೇ ಈತ ಅಳಲಾರಂಭಿಸಿದ. ಯಾಕೆಂದರೆ ಕಲ್ಲು ಹೊಡೆದಾತ ಅವನೇ ಆಗಿದ್ದ. ಆಕೆಯ ಕೈ ಹಿಡಿದು ತಕ್ಷಣ ನಾನೇ ನಿನ್ನನ್ನು ಸಂತೋಷದಿಂದ ವರಿಸುವೆ ಎಂದು ಮಾತನ್ನು ಕೊಟ್ಟನು.
ನೀತಿ :– ಸತ್ಯ ಹೇಳುವುದಕ್ಕಿಂತ ಸುಳ್ಳು ಹೇಳುವುದು ಸುಲಭ. ಕೊಟ್ಟ ಮಾತನ್ನು ಪರಿಪಾಲಿಸುವುದು ಕಷ್ಟ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.