ಪ್ರಮುಖ ಸುದ್ದಿ
ಯಾದಗಿರಿ ಉಸ್ತುವಾರಿ ಸಚಿವರ ಬದಲಾವಣೆ.!
ಯಾದಗಿರಿ ಉಸ್ತುವಾರಿ ಸಚಿವರಾಗಿ ಆರ್.ಶಂಕರ ನೇಮಕ
ಯಾದಗಿರಿಃ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವಲ್ಲಿ ಸರ್ಕಾರ ಮತ್ತೆ ಒಂದಿಷ್ಟು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಬೀದರ ಮತ್ತು ಯಾದಗಿರಿ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಸಚಿವ ಪ್ರಭು ಚವ್ಹಾಣ ಅವರು ಇಲ್ಲಿವರೆಗೆ ಕಾರ್ಯನಿರ್ವಹಿಸುತ್ತಿದ್ದರು.
ಇದೀಗ ಹೆಚ್ಚಿನ ಜವಬ್ದಾರಿ ಯಾದಗಿರಿ ಉಸ್ತುವಾರಿ ಯಿಂದ ಪ್ರಭು ಚವ್ಹಾಣ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಇದೀಗ ಸರ್ಕಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಯಾದಗಿರಿ ಜಿಲ್ಲೆ ತೆಗೆದು ಬೀದರ ಜಿಲ್ಲೆಯ ಉಸ್ತುವಾರಿಯಾಗಿ ಮಾತ್ರ ಸಚಿವ ಪ್ರಭು ಚವ್ಹಾಣ ಮುಂದುವರೆದಿದ್ದಾರೆ.
ಇದೇ ವೇಳೆ ಅರವಿಂದ ಲಿಂಬಾವಳಿ ಅವರನ್ನು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ಆದೇಶಿಸಿದೆ.