ದೋರನಹಳ್ಳಿ ದುರಂತಃ ಸಾವಿನ ಸಂಖ್ಯೆ 14 ಕ್ಕೆ ಏರಿಕೆ
yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಪೊಟಗೊಂಡು 24-25 ಜನ ಗಾಯಗೊಂಡಿದ್ದರು.
ಅದರಲ್ಲಿ ಶನಿವಾರ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈರಣ್ಣ ಹಣಮಂತ್ರಾಯ ಇಜೇರಿ (50) ಮತ್ತು ನಾಗಣ್ಣ ವೀರಬಸಪ್ಪ ಹಳ್ಳದ (47) ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.