ಸತ್ಯ ಚುರುಕು, ದುಃಖಕರ, ಕಾಂಗ್ರೆಸ್ಸಿಗರಿಗೆ ಹೃದಯವಿದ್ರೆ ಸಿನಿಮಾ ನೋಡಲಿ – ಡಾ.ಅಶ್ವತ್ಥ್
ಸತ್ಯ ಮರೆಯಾಗಲ್ಲ..
ಸತ್ಯ ಚುರುಕು, ದುಃಖಕರ, ಕಾಂಗ್ರೆಸ್ಸಿಗರಿಗೆ ಹೃದಯವಿದ್ರೆ ಸಿನಿಮಾ ನೋಡಲಿ – ಡಾ.ಅಶ್ವತ್ಥ್
ವಿವಿ ಡೆಸ್ಕ್ಃ ದಿ ಕಾಶ್ಮೀರ ಫೈಲ್ಸ್ ಚಿತ್ರ ಸತ್ಯ ಸಂಗತಿ ಅನಾವರವಾಗಿದೆ. ಇದನ್ನು ರಾಜಕೀಯವಾಗಿ ವಿರೋಧಿಸುವದು ಸರಿಯಲ್ಲ. ನಡೆದ ಕಹಿ ಘಟನೆಗೆ ಪ್ರಸ್ತುತ ನ್ಯಾಯ ಒದಗಿಸಲಾಗಿಲ್ಲ. ಕನಿಷ್ಠ ಪಕ್ಷ. ಚಿತ್ರ ನೋಡಿಯಾದರೂ ಸತ್ಯದ ಅರಿವು ಮಾಡಿಕೊಂಡು ಮಾನವೀಯತೆ ಯಾದರೂ ಮೆರೆಯಿರಿ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡಿಸಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಕೇಂದ್ರದಲ್ಲಿರುವಾಗ ಇಂತಹ ಘಟನೆ ನಡೆದಿದೆ. ಆಗಿನ ಅವರ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ. ಕಾಶ್ಮೀರಿ ಪಂಡಿತರು ಅನುಭವಿಸಿದ ಕರಾಳ ನರಕಯಾತನೆ ಇಂದಿಗೂ ಮಾಸಿಲ್ಲ. ಸತ್ಯ ಚುರುಕಾಗಿ ಮತ್ತು ದುಃಖ ತರಿಸುವಂತಹದ್ದು, ಎಲ್ಲರಿಗೂ ಗೊತ್ತು. ಆದರೆ ಉದ್ಧಟತನ ಹೇಳಿಕೆ ನೀಡುವದು ಸರಿಯಲ್ಲ.
ಅಂತಹ ಕಹಿ ಘಟನೆ ಇತಿಹಾಸ ಮುಚ್ಚಿ ಹೋಗಬಾರದು ಆ ಕುರಿತು ಜಾಗೃತಿ ಅಗತ್ಯವಿದೆ. ಅಂತಹ ಘಟನೆಗಳು ಮರುಕಳುಹಿಸಬಾರದು ಎಂದ ಅವರು, ಕಾಂಗ್ರೆಸ್ ಗರಿಗೆ ಹೃದಯ, ಮನಸ್ಸೇನಾದರೂ ಇದ್ರೆ ಚಿತ್ರ ನೋಡಲಿ ಮೊದಲು. ಆ ಕುರಿತು ಸತ್ಯ ಮರೆಮಾಚದಿರಲಿ. ಅದು ಬಿಟ್ಟು ಚಿತ್ರ ನೋಡದಿರಿ, ನಾವ್ಯಾರು ನೋಡುವದಿಲ್ಲ ಎಂದು ವಿಪಕ್ಷದ ಅರಿವಿನಲ್ಲಿ ವಿರೋಧಿಸುವ ಹೇಳಿಕೆ ನೀಡುವದು ಸರಿಯಲ್ಲ ಎಂದರು.