ಪ್ರಮುಖ ಸುದ್ದಿ

ಹಠಾತ್ತನೆ ಕುಸಿದು ಬಿದ್ದ DSP ವೆಂಕಟೇಶ ಹುಗಿಬಂಡಿ, ಸ್ಪಂಧನ ಆಸ್ಪತ್ರೆಗೆ ದಾಖಲು

ಹಠಾತ್ತನೆ ಕುಸಿದು ಬಿದ್ದ DSP ವೆಂಕಟೇಶ ಹುಗಿಬಂಡಿ, ಸ್ಪಂಧನ ಆಸ್ಪತ್ರೆಗೆ ದಾಖಲು

ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ಡಿಎಸ್ಪಿ ವೆಂಕಟೇಶ ಹುಗಿಬಂಡಿ ಅವರು ಸುರಪುರ ಪಟ್ಟಣದ ಕಚೇರಿಯಲ್ಲಿಯೇ ಹಠಾತ್ತನೆ ಕುಸಿದು ಬಿದ್ದ ಪರಿಣಾಮ ಅವರನ್ನು ಶಹಾಪುರದ ಸ್ಪಂಧನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸದ್ಯ ಇಸಿಜಿ ಇತರೆ ಟೆಸ್ಟ್ ಮಾಡಿಸಲಾಗುತ್ತಿದ್ದು, ಯಾವುದೇ ಸ್ಪಷ್ಟತೆ ಕಂಡು ಬಂದಿಲ್ಲ. ನಿರಂತರ ಕರ್ತವ್ಯದಲ್ಲಿರುವದರಿಂದ ಸರಿಯಾದ ವೇಳೆಗೆ ಊಟ ಮಾಡದ ಕಾರಣ ಅವರಿಗೆ ತಲೆಸುತ್ತು ಬಂದು‌‌ ಬಿದ್ದಿರಬಹುದೆಂದು‌ ಊಹಿಸಲಾಗಿದೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಸದ್ಯ ಯಾವುದೇ ಪ್ರಾಣಪಾಯವಿಲ್ಲ ಎಂದು ಹೇಳಲಾಗುತ್ತಿದೆ.

ಕಲ್ಬುರ್ಗಿ ವಿಭಾಗದ ಖ್ಯಾತ ವೈದ್ಯ ಡಾ.ಶಂಕರಗೌಡ ಆಲ್ದಾಳ ಅವರನ್ನು ಸಂಪರ್ಕಿಸಲಾಗಿ ಸದ್ಯ ಇಸಿಜಿ ನಾರಮಲ್ ಆಗಿದ್ದು ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎನ್ನಲಾಗಿದೆ. ಆದಾಗ್ಯು ಸಂಪೂರ್ಣ ಆರೋಗ್ಯ ಕುರಿತು ಚಕಪ್ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೊರೊನಾ‌ ನಿಯಂತ್ರಣಕ್ಕಾಗಿ ನಿರಂತರ ಕರ್ತವ್ಯ ನಿರತ ಡಿಎಸ್ಪಿ ಹುಗಿಬಂಡಿ ಅವರು ಅಪಾರ ಜನಪರ ಕಾಳಜಿವಹಿಸಿದ್ದು, ಶಹಾಪುರ-ಸುರಪುರ‌ ಭಾಗದಲ್ಲಿ ಉತ್ತಮ‌ ಹೆಸರು ಮಾಡಿದ್ದಾರೆ. ದೇವರು ಅವರನ್ನು ಗುಣಮುಖರನ್ನಾಗಿ ಮಾಡಿ ಶೀಘ್ರದಲ್ಲಿ ಮತ್ತೆ ಕರ್ತವ್ಯ ಹಾಜರಾಗುವಂತೆ ಮಾಡಲಿ‌ ಎಂದು *ವಿನಯವಾಣಿ* ಬಳಗ ಪ್ರಾರ್ಥಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button