ವಿಜಯನಗರ ಸಾಮ್ರಾಜ್ಯ ಸ್ಥಾಪಕ ಯಾರು.? ಎಂಬ ಪ್ರಶ್ನೆಗೆ ಫನ್ನಿ ಉತ್ತರ ಬರೆದ ವಿದ್ಯಾರ್ಥಿ
ವಿಜಯನಗರ ಸಾಮ್ರಾಜ್ಯ ಸ್ಥಾಪಕ ಯಾರು.? ಎಂಬ ಪ್ರಶ್ನೆಗೆ ಫನ್ನಿ ಉತ್ತರ ಬರೆದ ವಿದ್ಯಾರ್ಥಿ
ಬಳ್ಳಾರಿಃ ವಿಜಯನಗರ ಸಾಮ್ರಾಜ್ಯದ ಸ್ಥಾಪಕನಾರು.? ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂದು ಶಾಲೆಯೊಂದರಲ್ಲಿ ಶಿಕ್ಷಕರು ಹಾಕಿದ ಪ್ರಶ್ನೆಗೆ ನೋಟ್ ಬುಕ್ ವೊಂದರಲ್ಲಿ ವಿದ್ಯಾರ್ಥಿಯೋರ್ವ ಶಾಸಕ ಆನಂದ ಸಿಂಗ್ ಎಂದು ಉತ್ತರ ಬರೆದಿರುವದು ಇದೀಗ ಫುಲ್ ವೈರಲ್ ಆಗಿದೆ.
ಶಾಸಕ ಆನಂದಸಿಂಗ್ ಬಳ್ಳಾರಿ ಜಿಲ್ಲೆ ವಿಭಜಿಸಿ ಹೊಸಪೇಟ ಸೇರಿದಂತೆ ಹೊಸ ಜಿಲ್ಲೆ “ವಿಜಯ ನಗರ” ಎಂದು ಘೋಷಿಸಿಲು ಶ್ರಮಿಸಿ ಜಯ ಸಾಧಿಸಿರುವ ಹಿನ್ನೆಲೆ ಏನೋ ವಿದ್ಯಾರ್ಥಿ ವಿಜಯ ನಗರ ಸಾಮ್ರಾಜ್ಯ ಸ್ಥಾಪಕ ನಾರು.? ಎಂಬ ಪ್ರಶ್ನೆಗೆ ಶಾಸಕ ಆನಂದ ಸಿಂಗ್ ಎಂದು ಬರೆಯುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ವಿಜಯನಗರ ಜಿಲ್ಲೆ
ಸ್ಥಾಪನೆಗೆ ಆನಂದಸಿಂಗ್ ಅವರದ್ದೆ ಅಪಾರ ಕೊಡುಗೆ ಇರುವದರಿಂದ ವಿದ್ಯಾರ್ಥಿ ಜಿಲ್ಲೆ ಮತ್ತು ಹಿಂದಿನ ಸಾಮ್ರಾಜ್ಯ ನಡುವೆ ವ್ಯತ್ಯಾಸ ಕಂಡುಕೊಳ್ಳುವಲ್ಲಿ ವಿಫಲರಾಗಿರಬಹುದು ಎನ್ನಲಾಗಿದೆ. ಆದರೂ ಉತ್ತರ ನೋಡಿ ಎಲ್ಲರೂ ಮುಖದಲ್ಲಿ ಮಂದಹಾಸ ಬೀರಿರುವದಂತು ಸತ್ಯವಾಗಿದೆ.
ಗಗಗ