ಪ್ರಮುಖ ಸುದ್ದಿ
ಶಹಾಪುರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ನಾಗರಿಕರು ಸಹಕರಿಸಲು ಮನವಿ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಲಿದೆ
ಯಾದಗಿರಿ: ನಿರಂತರ ವಿದ್ಯುತ್ ಪೂರೈಸಲು ಹಾಗೂ ವಿದ್ಯುತ್ ಅವಗಡ ಆಗದಂತೆ ತಡೆಯಲು 110ಕೆವಿ ವಿದ್ಯುತ್ ವಿತರಣಾ ಕೇಂದ್ರ ಶಹಾಪೂರನಲ್ಲಿ 33ಕೆವಿ ಬ್ರೇಕರ್ಸ್ ಸರ್ವಿಸಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಯುಕ್ತ 2022 ಜನವರಿ 3 ಸೋಮವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ಶಹಾಪೂರ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮತ್ತು 110 ಕೆವಿ ಶಹಾಪೂರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ 33 ಕೆವಿ ಮತ್ತು 11 ಕೆವಿ ವಿದ್ಯುತ್ ಫೀಢರ್‍ಗಳಿಗೆ ವಿದ್ಯುತ್ ವ್ಯತ್ಯಾಯ ಉಂಟಾಗಲಿದೆೆ.
ಶಹಾಪೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಜೆಸ್ಕಾಂಗೆ ಸಹಕರಿಸಬೇಕಾಗಿ ಯಾದಗಿರಿ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.