ಪ್ರಮುಖ ಸುದ್ದಿ

ಡಿಎಪಿ ಸಬ್ಸಿಡಿ 140% ಹೆಚ್ಚಳ ಐತಿಹಾಸಿಕ ನಿರ್ಧಾರ ಶಿರವಾಳ ಸ್ವಾಗತ

ಡಿಎಪಿ ಸಬ್ಸಿಡಿ 140% ಹೆಚ್ಚಳ ಐತಿಹಾಸಿಕ ನಿರ್ಧಾರ ಶಿರವಾಳ ಸ್ವಾಗತ

yadgiri, ಶಹಾಪುರಃ ಡಿಎಪಿ ರಸಗೊಬ್ಬರ ಸಬ್ಸಿಡಿಯನ್ನು ಶೇ.140 ರಷ್ಟು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ರೈತ ಸ್ನೇಹಿ ಎಂಬುದನ್ನು ಸಾಬೀತು ಪಡಿಸಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಡಿಎಪಿ ರಸಗೊಬ್ಬರ ಸಬ್ಸಿಡಿಯಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಪ್ರಧಾನಿ ಮೋದಿಜೀ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಫಾಸ್ಫಾರಿಕ್ ಆಸಿಡ್ ಮತ್ತು ಅಮೋನಿಯಾಗಳ ಬೆಲೆ ಶೇ.60 ರಿಂದ 70 ರಷ್ಟು ಹೆಚ್ಚುತ್ತಿರುವದರಿಂದ ರಸಗೊಬ್ಬರಗಳ ಬೆಲೆಯು ಹೆಚ್ಚಳವಾಗುತ್ತಿದೆ. ಕನಿಷ್ಟ ರಸಗೊಬ್ಬರ ಬೆಲೆ 2400 ರೂ.ಆಗಿದ್ದು, ಇದು ಭಾರತದ ರೈತರಿಗೆ ಹೊರೆಯಾಗಲಿದೆ ಎಂಬುದನ್ನು ಸಮರ್ಪಕ ಮಾಹಿತಿ ಪಡೆದುಕೊಂಡ ಪ್ರಧಾನಿಯವರು ಕಳೆದ ಬಾರಿ 500 ರೂ.ಸಬ್ಸಿಡಿ ನೀಡಲಾಗಿತ್ತು.

ಆಗ ಸಬ್ಸಿಡಿ 500 ತೆಗೆದಡೆ ಡಿಎಪಿ ಬೆಲೆ 1700 ರೂ.ದರದಲ್ಲಿ ದೊರೆಯುತಿತ್ತು. ಈ ಬಾರಿ ಶೇ.140 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಕೇವಲ 1200 ರೂ.ದರದಲ್ಲಿಯೇ ರೈತರಿಗೆ ಡಿಎಪಿ ರಸಗೊಬ್ಬರ ದೊರೆಯಲಿದೆ. ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಣಯದಿಂದ ರೈತಾಪಿ ಜನರಿಗೆ ಖುಷಿ ತಂದಿದೆ.

ಅಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗಳಿಗೆ ನೇರವಾಗಿ 20,667 ಕೋಟಿ ರೂಪಾಯಿಗಳನ್ನು ವಾರ್ಗಯಿಸುವ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ರೈತರಿಗೆ ಇದು ಅನುಕೂಲವಾಗಲಿದೆ. ಇದರಿಂದ ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕೆ ಬದ್ಧವಾಗಿದೆ ಎಂಬುದನ್ನು ತೋರಿಸಿಕೊಡುತ್ತಿದೆ. ರೈತರ ಹಿತಪರ ಕಾರ್ಯಗಳನ್ನು ಕೈಗೊಂಡ ಪ್ರಧಾನಿ ಅವರ ನಿರ್ಧಾರವನ್ನು ಸ್ವಾಗತಾರ್ಹವಾಗಿದೆ ಎಂದು ಮಾಧ್ಯಮಕ್ಕೆ ಪ್ರಕಟಣೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button