ಐಸಿಸಿ ಸಭೆ ಅವೈಜ್ಞಾನಿಕ ನಿರ್ಧಾರದಿಂದ ರೈತ ಕಂಗಾಲು – ಶಿರವಾಳ ಆರೋಪ
ಕಾಲುವೆಗೆ ನೀರು ನಿಯಮ ಐಸಿಸಿ ಸಭೆ ಅವೈಜ್ಞಾನಿಕ ನಿರ್ಧಾರ
ಐಸಿಸಿ ಸಭೆ ನಿರ್ಧಾರ ರೈತರಿಗೆ ಅನ್ಯಾಯ – ಶಿರವಾಳ ಆಕ್ರೋಶ
ಕಾಲುವೆಗೆ ನೀರು ನಿಯಮ ಐಸಿಸಿ ಸಭೆ ಅವೈಜ್ಞಾನಿಕ ನಿರ್ಧಾರಃ ಶಿರವಾಳ
yadgiri, ಶಹಾಪುರಃ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲು ಮೊನ್ನೆ ಬೆಂಗಳೂರಿನಲ್ಲಿ ನಡೆಸಿದ ಐಸಿಸಿ ಸಭೆಯಲ್ಲಿ ಅವೈಜ್ಞಾನಿಕ ನಿರ್ಧಾರ ಕೈಗೊಂಡ ಪರಿಣಾಮ ರೈತರ ಬೆಳೆಗಳಿಗೆ ಪ್ರಸಕ್ತ ನೀರು ಹರಿಸದಿರುವದು ಮೆಣಸಿನಕಾಯಿ, ತೊಗರಿ ಬೆಳೆಗಳು ಒಣಗುವ ಸಾಧ್ಯತೆ ಹೆಚ್ಚಿದ್ದು, ಮತ್ತೊಮ್ಮೆ ರೈತರು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಸಿಸಿ ಸಭೆಯಲ್ಲಿ ಕೃಷ್ಣಾ ಕಾಲುವೆಗಳಿಗೆ ಡಿ.12 ರಿಂದ 14 ದಿನ ಕಾಲುವೆಗೆ ನೀರು 10 ದಿನ ಬಂದ್ ಮಾಡುವ ನಿಯಮ ಜಾರಿಗೊಳಿಸಿರುವದು ರೈತರಲ್ಲಿ ಆತಂಕ ಮೂಡಿಸಿದೆ. ಸುಮಾರು 21 ದಿವಸ ಬೆಳೆಗಳಿಗೆ ನೀರಿಲ್ಲದೆ ಒಣಗಿಹೋಗಲಿವೆ.
ಪ್ರಸಕ್ತ ಮೆಣಸಿನಕಾಯಿಗೆ ವಾರಕ್ಕೊಮ್ಮೆ ನೀರು ಬಿಡದಿದ್ದರೆ, ಬೆಳೆ ಬಾಡಿ ಹೋಗಲಿದ್ದು, ಸಮರ್ಪಕ ನೀರು ನೀಡದಿದ್ದರೆ ಫಸಲು ಚನ್ನಾಗಿ ಬರುವದಿಲ್ಲ. ತೊಗರಿ ಬೆಳೆಗೂ ನೀರು ಅಗತ್ಯವಿದೆ. ಡಿಸೆಂಬರ್ 12 ರವರೆಗೆ ನೀರು ಬಿಡುವದಿಲ್ಲ ಎಂದಾದರೆ ಮೆಣಸಿನಕಾಯಿ, ತೊಗರಿಗೆ ನೀರಿಲ್ಲದೆ ಬಾಡಿ ಹೋದರೆ ರೈತರ ಹಿತ ಹೇಗಾದೀತು.? ರೈತರನ್ನು ಕಷ್ಟಕ್ಕೆ ಈಡು ಮಾಡಿದಂತಾಗುವದಿಲ್ಲವೇ.? ಸದ್ಯ ಮುಂಗಾರು ಹಂಗಾಮಿನ ನೀರು ಡಿಸೆಂಬರ್ ವರೆಗೂ ನೀರು ಹರಿಸಬೇಕಿದೆ. ಈ ಬಾರಿ ನವೆಂಬರ್ ನಲ್ಲಿಯೇ ನೀರು ಬಂದ್ ಮಾಡುವ ಫರ್ಮಾನು ಹೊರಡಿಸಿದೆ. ಅಲ್ಲದೆ ಈ ಬಾರಿ ಆಲಮಟ್ಟಿ ಡ್ಯಾಂನಲ್ಲಿ ಉತ್ತಮ ನೀರು ಸಂಗ್ರಹವಿದೆ ಎನ್ನುವ ಐಸಿಸಿ ಮತ್ತೇಕೆ ನೀರು ಹರಿಸುತ್ತಿಲ್ಲ.
ರೈತರಿಗೆ ಅನ್ಯಾಯಃ ಮುಖ್ಯವಾಗಿ 38.54 ಟಿಎಂಸಿ ನೀರು ಕೈಗಾರಿಕೆ, ಕುಡಿಯುವ ನೀರು ಮತ್ತು ಭಾಷ್ಮಿಕರಣಕ್ಕೆ ಮೀಸಲಿಡುವದನ್ನು ತೋರಿಸಿದ್ದಾರೆ. ಪ್ರತಿವರ್ಷ ಕೈಗಾರಿಕೆಗೆ ಎಷ್ಟು ಟಿಎಂಸಿ ನೀರು ಉಪಯೋಗವಾಗುತ್ತಿದೆ.? ಕುಡಿಯುವ ನೀರಿಗೆ ಎಷ್ಟು ಬಳಕೆ.? ಬಾಷ್ಮೀಕರಣಕ್ಕೆ ಎಷ್ಟು ಟಿಎಂಸಿ ಬಳಕೆಯಾಗುತ್ತದೆ.? ಎಂಬುದು ಅಧಿಕಾರಿಗಳು ಪ್ರತಿವರ್ಷದ ಡೇಟಾ ನೀಡುವ ಮೂಲಕ ಸ್ಪಷ್ಟೀಕರಣ ಕೊಡಬೇಕು ಎಂದ ಶಿರವಾಳ ಅವರು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.
ರೈತರ ಹಿತ ಕಾಪಾಡಬೇಕಿದ್ದ ಸರ್ಕಾರ ಈ ಕೂಡಲೇ ಮುತುವರ್ಜಿವಹಿಸಿ ಕೂಡಲೇ ಐಸಿಸಿ ಹೊರಡಿಸಿದ ಫರ್ಮಾನು ಮಾರ್ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಕೈಗಾರಿಕೆಗೆ ಬೇಕಾದ ನೀರನ್ನು ಆಗಲೇ ಅವರು ಸಂಗ್ರಹಿಸಿಕೊಂಡಿರುತ್ತಾರೆ. ಮತ್ತು ಕೈಗಾರಿಕೆಗಾಗಿ ಎಂದು ನೀರು ಕಾಯ್ದಿರಿಸಲಾಗುತ್ತದೆ.
ಕಾಯ್ದಿರಿಸಿದ ನೀರಿನಲ್ಲಿ ಎಷ್ಟು ಟಿಎಂಸಿ ಕೈಗಾರಿಕೆಗೆ ಬಳಕೆಯಾಗುತ್ತಿದೆ ಎಂಬುದನ್ನು ಪ್ರತಿ ವರ್ಷದ ಡೇಟಾ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸದ್ಯ ಕಾಲುವೆಗೆ ನೀರು ಹರಿಸದಿದ್ದರೆ ರೈತರು ರೊಚ್ಚಿಗೇಳುವದು ಗ್ಯಾರಂಟಿ ಬೆಳೆ ಒಣಗಿ ರೈತರು ಮತ್ತೆ ಕಷ್ಟಕೊಳ್ಳಗಾಗಲಿದ್ದಾರೆ. ಈ ಕುರಿತು ಸಿಎಂ ಜೊತೆ ಸಂಬಂಧಿಸಿದ ಸಚಿವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.