ಶಹಾಪುರದ ಬಾನಂಗಳದಿ ಹನುಮಂತ ಸಪ್ತ ಸಾಗರ ದಾಟುತ್ತಿರುವ ಚಿತ್ರ ಹಲವರಿಂದ ಭಕ್ತಿಯ ನಮನಗಳು
ಬಾನಂಗಳದಿ ಹನುಮ ಸಪ್ತ ಸಾಗರ ದಾಟುತ್ತಿರುವ ಚಿತ್ರ ರೂಪಕ ಕಂಡ ಭಕ್ತಕೋಟಿ ಪುಳಕ
ವಿವಿ ಡೆಸ್ಕ್ ಯಾದಗಿರಿ ಜಿಲ್ಲೆಯ ಶಹಾಪುರದ ಬಸ್ ನಿಲ್ದಾಣದಲ್ಲಿ ಕುಳಿತಿರುವಾಗ ಆಕಸ್ಮಿಕವಾಗಿ ಗಾನದಲ್ಲಿ ಕಂಡ ಈ ಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರು ಉತ್ತಮ ಛಾಯಾಗ್ರಾಹಕ ಸಾಗರ ಮಂಜು (ಮಂಜುನಾಥ ಬಿರೆದಾರ) ಗ್ರಾಮೀಣ ಕೆಪಿ ವರದಿಗಾರ.
ಈ ಚಿತ್ರ ನೋಡಿದಾಕ್ಷಣ ಹನುಮಂತ ಸಪ್ತ ಸಾಗರ ದಾಟುವ ರೂಪಕ ದೃಶ್ಯ ನೆನಪಿಸುತ್ತದೆ.
ಹೀಗಾಗಿ ನಿಲ್ದಾಣದಲ್ಲಿ ಚಿತ್ರ ತೆಗೆಯುವುದನ್ನು ಕಂಡ ಜನ’ ಹೌದಲ್ಲ.. ಇದು ಹನುಮಂತ ಸಾಗರ ದಾಟುತ್ತಿದ್ದಾನೆ ಎಂಬ ದೃಶ್ಯದಂತೆ ಗೋಚರಿಸುತ್ತಿದೆ ಎಂದು ಭಕ್ತಿಯ ನಮನಗಳು ಸಲ್ಲಿಸಿದರಂತೆ.
ನಿಜವಾಗಿಯೂ ಹೌದು ಈ ಚಿತ್ರ ಅಪ್ಪಟ ಹನುಮ, ಸೀತಾ ದೇವಿಯನ್ನು ಹುಡುಕಲು ಸಪ್ತ ಸಾಗರದಾಚೆ ಹೊರಟಿರುವಂತೆ ಮೂಡಿದೆ.
ಹೀಗಾಗಿ ಎಲ್ಲರೂ ಹನುಮಂತ ಶಹಾಪುರೂರಿನ ಗಗನ ಕುಸುಮದಲ್ಲಿ ಮೂಡಿರುವದು ಸಂತಸ ತಂದಿದೆ ಎಂದು ಸ್ಮರಣಿಸುವದು ಕಂಡು ಬಂದಿತು. ಅಂತು ಇಂತು ನೀವು ಒಮ್ಮೆ ಈ ಚಿತ್ರ ನೋಡಿ ಕಲ್ಪನಾ ಲೋಕದೊಳಗೆ ಇಳಿದು ಭಕ್ತಿಪೂರ್ವಕವಾಗಿ ಕಂಡು ಖುಷಿ ಪಡಿ.
– ಮಲ್ಲಿಕಾರ್ಜುನ ಮುದ್ನೂರ