ಕಾವ್ಯ
ಕಾಲಚಕ್ರ ಅರ್ಥೈಸಿಕೊಂಡು ಮುನ್ನಡೆಯಿರಿ
ಕಾಲಚಕ್ರ
ಹಚ್ಚಿದರೆ ದೀಪ ಹಚ್ಚು ಬೆಂಕಿ ಹಚ್ಚಬೇಡ. ಆರಿಸಿದರೆ ಬೆಂಕಿ ಆರಿಸು ದೀಪ ಆರಿಸಬೇಡ.
ಕಟಿದರೆ ಶಿಲ್ಪಿಯಂತೆ ಕಟಿದು ಮೂರ್ತಿಯನ್ನಾಗಿಸು, ಆದರೆ ಕಲ್ಲನ್ನು(ನನ್ನ) ಪುಡಿಮಾಡಿ ಎಸೆಯಬೇಡ.
ಹಸಿದು ಬಂದವರಿಗೆ ಹೊಟ್ಟೆ ತುಂಬ ಉಣ ಬಡಿಸು.
ಆದರೆ ಅರೆಬರೆ ಆಸೆ ತೋರಿಸಿ ಕಳುಹಿಸಬೇಡ.
ಒಬ್ಬರಿಗೆ ಪ್ರೀತಿ ಕೊಟ್ಟ ಮೇಲೆ ಮುಗೀತು ಕೊನೆವರೆಗೂ ಹಾಗೇ ನಡ್ಕೋ.
ಆದರೆ ಬಟ್ಟೆ ಬದಲಿಸದಂತೆ ಬಳಸದಿರು.
ರಾತ್ರಿ ಆದ ಮೇಲೆ ಹಗಲು ಬಂದೆ ಬರುತ್ತದೆ.
ಆದರೆ ರಾತ್ರಿ ಮುಗೀತಿನ್ನೇನು.. ಹಗಲೇ ಎಲ್ಲಾ.. ಅನ್ಕೋಬೇಡ
ಮತ್ತೆ ರಾತ್ರಿಯಾಗಲೇ ಬೇಕು.
ಇವತ್ಯಾಕೋ ಸೂರ್ಯ ಬಂದಿಲ್ಲ ಅಂದ್ರೆ ಸತ್ತೆ ಹೋದ ಅನ್ಕೋಬೇಡ..
ಮೋಡಗಳು ಅಡ್ಡ ಬಂದಿರಬೇಕು..ಅಷ್ಟೆ ಮತ್ತೆ ಸೂರ್ಯ ಬಂದೇ ಬರ್ತಾನೆ.
ರೂಪ ನೋಡಿ ಕುರಿ, ಕತ್ತೆ, ನಾಯಿ, ಗೋರಿಲ್ಲ ಎಂದು ಹೀಯಾಳಿಸಬೇಡ..
ಮನುಜರಲ್ಲಿ ಅವುಗಳಿಗಿಂತ ಕನಿಷ್ಠರಿದ್ದಾರೆ.
– ಮಲ್ಲಿಕಾರ್ಜುನ ಮುದ್ನೂರ.