ವಾಹನ ಸವಾರರಿಗೆ ಬಿಗ್ ಶಾಕ್: HSRP -Number Plate ಇಲ್ಲದ ವಾಹನ ಜಪ್ತಿ!
(HSRP -Number Plate) ರಾಜ್ಯ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆ.15 ಕ್ಕೆ ಮುಕ್ತಾಯಗೊಳ್ಳಲಿದ್ದು, ಸೆ.16 ರಿಂದ HSRP ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಎರಡು ಬಾರಿ ಮಾತ್ರ ದಂಡ ವಿಧಿಸಿ ಮೂರನೇ ಬಾರಿಗೆ ವಾಹನ ಜಪ್ತಿ ಮಾಡುವ ಕುರಿತು ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
2 ಸಲ ದಂಡ, 3 ನೇ ಸಲ ವಾಹನ ಜಪ್ತಿ?:
ಸೋಮವಾರದಿಂದ ಫೀಲ್ಡ್ ಗೆ ಇಳಿಯಲಿರುವ ಸಾರಿಗೆ ಅಧಿಕಾರಿಗಳು ಸೆಪ್ಟೆಂಬರ್ 16 ರಿಂದ HSRP ಇಲ್ಲದಿದ್ರೆ ದಂಡ ಫಿಕ್ಸ್ ಆಗುತ್ತೆ. ರಾಜ್ಯದಲ್ಲಿ ಒಟ್ಟು 2 ಕೋಟಿ ವಾಹನಗಳಿಗೆ HSRP ಅಳವಡಿಸಬೇಕಿತ್ತು. ಆದರೆ ಕೇವಲ 52 ಲಕ್ಷ ವಾಹನಗಳಿಗೆ ಮಾತ್ರ ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳಿಗೆ HSRP ಅಳವಡಿಕೆ ಬಾಕಿಯಿದೆ.
ಮೊದಲ ಬಾರಿಗೆ 500 ದಂಡ, ಎರಡನೇ ಬಾರಿ 1000 ರೂ ದಂಡ. ಮೂರನೇ ಬಾರಿ ಸಿಕ್ಕಾಕಿಕೊಂಡರೆ ಅಂತಹ ವಾಹನ ಜಪ್ತಿ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 2019ರ ಎಪ್ರಿಲ್ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. HSRP ನಂಬರ್ ಪ್ಲೇಟ್ ಬುಕಿಂಗ್ ನಲ್ಲಿ ನಗದು ವ್ಯವಹಾರವಿಲ್ಲ. ಆನ್ ಲೈನ್ ಮೂಲಕವೇ ಬುಕಿಂಗ್, ಆನ್ ಲೈನ್ ಮೂಲಕವೇ ಪಾವತಿ ಮಾಡಬೇಕು. ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು ಅನುಸರಿಸಬೇಕಾದ ವಿಧಾನ ಇಲ್ಲಿದೆ.
ಇಲ್ಲಿದೆ ನೋಡಿ ಹಂತ ಹಂತದ ಮಾಹಿತಿ:
* https://transport.karnataka.gov.in ಅಥವಾ www.siam.in ಪೋರ್ಟಲ್ನಲ್ಲಿ ಲಾಗಿನ್ ಆಗಬೇಕು.
* Book HSRP ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
* ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ
* ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ
* HSRP ನಂಬರ್ ಪ್ಲೇಟ್ಗೆ ಪಾವತಿ ಮಾಡಿ
* ಮೊಬೈಲ್ ನಂಬರ್ಗೆ ಬರವು ಒಟಿಪಿಯನ್ನು ನಮೂದಿಸಿ
* HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ