ಪ್ರಮುಖ ಸುದ್ದಿ

ಹೊನ್ಕಲ್ ಜನ್ಮ ದಿನಃ ಬಳಗದಿಂದ ಸಸಿ ನೆಡುವ ಕಾರ್ಯ

ಪ್ರತಿಯೊಬ್ಬರು ಗಿಡ ಬೆಳೆಸುವ ನಿಯಮ ಜಾರಿಯಾಗಲಿಜಗಧೀಶ ಹೊನ್ಕಲ್

yadgiri, ಶಹಾಪುರಃ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಅದರ ಪೋಷಣೆ ಪಾಲನೆ ಮಾಡಬೇಕು. ಪ್ರಸ್ತುತ ಶುದ್ಧ ಗಾಳಿ ಸೇವನೆ ಅತಿ ಮುಖ್ಯವಾಗಿದೆ ಎಂದು ಉದ್ಯಮಿ ಜಗಧೀಶ ಹೊನ್ಕಲ್ ತಿಳಿಸಿದರು.

ನಗರದ ದಿಗ್ಗಿ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಯಲ್ಲಿ ಉದ್ಯಮಿ ಜಗಧೀಶ ಹೊನ್ಕಲ್ ಅವರ ಜನ್ಮ ದಿನ ಅಂಗವಾಗಿ ವಾಕಿಂಗ್ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಸಸಿ ನೆಟ್ಟು ನೀರೆರಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಅರಣ್ಯ ಸಮೃದ್ಧವಾಗಿದ್ದಲ್ಲಿ ಪರಿಶುದ್ಧ ಗಾಳಿ ಸೇವನೆ ಮಾಡಬಹುದು. ಕಾಂಕ್ರೀಟ್ ನಾಡಿನಲ್ಲಿ ಕಲುಷಿತ ವಾತಾವರಣದಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಕಾಲ ಕಾಲಕ್ಕೆ ಮಳೆ ಆಗುತ್ತಿಲ್ಲ. ಮಳೆ ಆಭಾವದಿಂದ ಬೆಳೆ ಫಸಲು ಬರುತ್ತಿಲ್ಲ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಿಸುವ ಸ್ಥಿತಿ ಬಂದಿದೆ. ಪ್ರತಿಯೊಬ್ಬರು ಜನ್ಮ ದಿನ ಅಂಗವಾಗಿ ಗಿಡ ನೆಟ್ಟು ಅದರ ಪಾಲನೆ ಮಾಡುವ ಕೆಲಸವಾಗಬೇಕಿದೆ.

ನಾಡು ಸುರಕ್ಷಿತವಾಗಿ ಇರಬೇಕೆಂದರೆ ಹಸೀರುಕರಣ ಬಹುಮುಖ್ಯವಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಸಸಿ ನೆಡುವ ನಿಯಮ ಜಾರಿಯಾಗಬೇಕು. ಬಾಲ್ಯದಿಂದಲೇ ಪರಿಸರ ಸ್ವಚ್ಛತೆ, ಗಿಡ ಬೆಳೆಸಿದಲ್ಲಿ ಹಸೀರುಕರಣಕ್ಕೆ ಒತ್ತು ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದವರಿಗೆ ಸರ್ಕಾರ ಕೆಲವೊಂದರಲ್ಲಿ ಮೀಸಲಾತಿ ಕಲ್ಪಿಸುವ ಕಾನೂನು ರೂಪವಾಗಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯ ಅಧಿಕಾರಿ ಐ.ಬಿ.ಹೂಗಾರ ಮಾತನಾಡಿ, ಪ್ರತಿಯೊಬ್ಬರು ಗಿಡ ಮರ ಬೆಳೆಸುವ ಪೋಷಿಸುವ ಕಾರ್ಯ ಮಾಡಬೇಕು. ವಾಕಿಂಗ್ ಗೆಳೆಯರ ಬಳಗ ದಿಗ್ಗಿ ಮಾರ್ಗದಲ್ಲಿ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವದು ಶ್ಲಾಘನೀಯ.

ನಗರದ ಸುತ್ತಮುತ್ತಲೂ ಇಂತಹ ಅವಕಾಶ ಇದ್ದದನ್ನು ಪರಿಗಣಿಸಿ ಪ್ರತಿಯೊಂದು ಸಂಘ, ಸಂಸ್ಥೆಗಳು ಅರಣ್ಯ ಇಲಾಖೆ ಜೊತೆ ಕೈಜೋಡಿಸಿ ಸಸಿ ನೆಟ್ಟು ಅವುಗಳ ಪಾಲನೆ ಮಾಡಿದಲ್ಲಿ ಮುಂಬರುವ ದಿನಗಳು ಉತ್ತಮವಾಗಿರಲಿವೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಇನ್ನಷ್ಟು ಕಷ್ಟಕರ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ, ಶರಣಗೌಡ ಕಟ್ಟಿಮನಿ, ಉಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ಶಕೀಲ್ ಮುಲ್ಲಾ, ರಾಜಶೇಖರ ಪತ್ತಾರ ಬಮ್ಮನಹಳ್ಳಿ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಸಿದ್ದನಗೌಡ ತಂಗಡಗಿ, ಬಸವರಾಜ ಚೌದ್ರಿ, ಬಸವರಾಜ ತಳವಾರ, ನೀಲಕಂಠ ಕಡಗಂಚಿ, ಮಲ್ಲಯ್ಯ ಸ್ವಾಮಿ ಚಿಕ್ಕಮಠ, ರಮೇಶ ನಗನೂರ ಸೇರಿದಂತೆ ಅರಣ್ಯ ರಕ್ಷಣ ದುರ್ಗಣ್ಣ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button