ಉದ್ಯೋಗಾವಕಾಶ: PUC ಆದವರಿಗೆ ಬೆಂಗಳೂರಿನಲ್ಲಿ ಡ್ರೈವರ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ – ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ, ಹೌದು ಬೆಂಗಳೂರಿನಲ್ಲಿ ಈ ಹುದ್ದೆಗಳಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ: ಕರ್ನಾಟಕ ರಾಜ್ಯ ಫೆಡರಲ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ (KSSFCL)
ಹುದ್ದೆಗಳು: 39
ವಯೋಮಿತಿ: 30 ರಿಂದ 35 ವರ್ಷ
ಹುದ್ದೆಗಳು: ಜೂನಿಯರ್ ಅಸಿಸ್ಟೆಂಟ್ ಹಾಗೂ ಡ್ರೈವರ್ ಸೇರಿದಂತೆ ವಿವಿದ ಹುದ್ದೆಗಳಿವೆ
ವಿದ್ಯಾರ್ಹತೆ: PUC, CA, CS, ICWA, HR, LLB, MA, MBA, MSW, Graduation,ತೇರ್ಗಡೆಯಾಗಿರಬೇಕು.
ಈ ಹುದ್ದೆಗಳಿಗೆ ಸಂಬಳ ಎಷ್ಟಿರುತ್ತದೆ?
ತರಬೇತಿ ಅಧಿಕಾರಿ – 35,000-38,000 ರೂಸೌಹಾರ್ದ ಅಭಿವೃದ್ಧಿ ಅಧಿಕಾರಿ – 28,000-30,000 ರೂಚಾರ್ಟರ್ಡ್ ಅಕೌಂಟೆಂಟ್ – 60,000-70,000 ರೂಸಹಾಯಕ – 20,000-22,000 ರೂಎಚ್ ಅಧಿಕಾರಿ – ರೂ 35,000 ರಿಂದ ರೂ 38,000ಕಿರಿಯ ಸಹಾಯಕ – 13,000-15,000 ರೂ.ಸಹಾಯಕ ಸಿಬ್ಬಂದಿ ಮತ್ತು ಸಾರಿಗೆ ಅಧಿಕಾರಿ – 13,000-15,000 ರೂ.ವಕೀಲರು – 35,000-38,000 ರೂಪಾಯಿಗಳು ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್ – 20,000-22,000 ರೂ.
ನೋಂದಣಿ ಶುಲ್ಕ ಎಷ್ಟು ಮತ್ತು ಯಾರಿಗೆ?
ಬೆರಳಚ್ಚುಗಾರ, ಶೀಘ್ರಲಿಪಿ, ಕಿರಿಯ ಸಹಾಯಕ, ಮಾನವ ಸಂಪನ್ಮೂಲ ಸಹಾಯಕ ಮತ್ತು ಆಟೋ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ರೂ.300/-.
ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ 500 ರೂ.ಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಈ ಹಣವನ್ನು ವಿನಿಮಯದ ಬಿಲ್ ರೂಪದಲ್ಲಿ ಪಾವತಿಸಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ವಿಳಾಸ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೂಡಲೇ ದಾಖಲೆಗಳ ಸಮೇತ ‘ಸೌಹಾರ್ದ ಸಹಕಾರಿ ಸೌಧ’, #68, ಮೊದಲನೇ ಮಹಡಿ, 18ನೇ ಅಡ್ಡ ರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055 ಇಲ್ಲಿಗೆ ಕಳುಹಿಸಬೇಕು.