ಕಾವ್ಯ

“ಕಾಲವೊಂದಿತ್ತು”..ಜಿ.ಬಿ.ಬಡಿಗೇರ ಕಾವ್ಯ ಬರಹ

ಕಾಲವೊಂದಿತ್ತು..!

ಒಂದು ಕಾಲವಿತ್ತು
ಕರುಳು ಬಳ್ಳಿಯ ನೆನೆಸಿ
ಅವ್ವನ ತವರಿಗೆ ಜೀವ ಓಡುತಿತ್ತು

ಒಂದು ಕಾಲವಿತ್ತು
ಅಪ್ಪನ ಹೆಗಲೇರಿ ಊರ ತೇರು
ನೋಡಲು ಮನಸು ಬಯಸುತಿತ್ತು

ಒಂದು ಕಾಲವಿತ್ತು
ಗೆಳೆಯರಗೂಡ ಆಟವಾಡಲು
ರಾತ್ರಿಯೂ ಹಗಲು ಆಗಿರಬೇಕೆನಿಸುತಿತ್ತು

ಒಂದು ಕಾಲವಿತ್ತು
ಹುಟ್ಟಿದೂರ ನೆನಪಾಗಿ
ಓದು ಬೇಡೆನಿಸಿ ಊರಿಗೆ ಓಡಬೇಕೆನಿಸುತಿತ್ತು

ಒಂದು ಕಾಲವಿತ್ತು
ಅಪ್ಪ ಅವ್ವನ ಬುದ್ಧಿ ಮಾತುಗಳೆ
ನಮಗೆ ವೇದವಾಕ್ಯ ಆಗಿರುತಿತ್ತು

ಎಲ್ಲವೂ ಈಗ
ಗತಕಾಲದ ನೆನಪುಗಳು
ಮರೆಯಲಾಗದ ಅನುಭವಗಳು

ಡಾ.ಜಿ.ಬಿ‌.ಬಡಿಗೇರ್
ಆಂಗ್ಲ ಭಾಷಾ ಶಿಕ್ಷಕ, ಸ.ಹಿ.ಪ್ರಾ.ಶಾಲೆ ಕೊಳ್ಳೂರ ಎಂ
ತಾ.ಶಹಾಪುರ. 9972348581

Related Articles

Leave a Reply

Your email address will not be published. Required fields are marked *

Back to top button