Homeಪ್ರಮುಖ ಸುದ್ದಿ

ಗಾಳಿಯಲ್ಲೇ ಕೆಟ್ಟು ನಿಂತ ಹೆಲಿಕಾಪ್ಟರ್​; ಕೇದಾರನಾಥದಲ್ಲಿ ತಪ್ಪಿದ ಅನಾಹುತ !

ಉತ್ತರಖಂಡ: ಕೇದಾರನಾಥ ಬಳಿ ಹೆಲಿಕಾಪ್ಟರ್​ ಒಂದು ಗಾಳಿಯಲ್ಲೇ ಕಟ್ಟು ನಿಂತಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಭಾರಿ ಅನಾಹುತ ತಪ್ಪಿದೆ. ಚಾರ್ ಧಾಮ್ ಯಾತ್ರೆ ಮುಂದುವರೆದಿದೆ. ಕೇದಾರನಾಥ ಧಾಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಆದರೆ, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಹೆಲಿಕಾಪ್ಟರ್​ನಲ್ಲಿ 6 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಇಲ್ಲಿಯವರೆಗೆ 3 ಲಕ್ಷ 40 ಸಾವಿರ ಯಾತ್ರಿಕರು ಗಂಗೋತ್ರಿ-ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಇನ್ನು ನಿಷೇಧಾಜ್ಞೆ ನಡುವೆಯೂ ದೇವಾಲಯದ ಆವರಣದಲ್ಲಿ ವಿಡಿಯೋ ಮಾಡದಂತೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಬದರಿನಾಥ ಧಾಮದಲ್ಲಿರುವ ದೇವಾಲಯದ ಆವರಣದಿಂದ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೋ ಮಾಡುತ್ತಿದ್ದ 37 ಮಂದಿಗೆ ಚಲನ್ ಜಾರಿ ಮಾಡಲಾಗಿದೆ. ಗುರುವಾರದವರೆಗೆ 1 ಲಕ್ಷ 77 ಸಾವಿರದ 749 ಭಕ್ತರು ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ. ಸಂಘಟಿತ ಪ್ರಯಾಣಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ. ಪ್ರವಾಸ ಮತ್ತು ಪ್ರಯಾಣ ಏಜೆನ್ಸಿಗಳಿಗೂ ಸೂಚನೆಗಳನ್ನು ನೀಡಲಾಗಿದೆ. ಈ ಸೂಚನೆಯ ಪ್ರಕಾರ ನೋಂದಾಯಿತ ಪ್ರಯಾಣಿಕರನ್ನು ಮಾತ್ರ ಕರೆತರುವಂತೆ ಸೂಚನೆ ನೀಡಲಾಗಿದೆ.     Ad

Related Articles

Leave a Reply

Your email address will not be published. Required fields are marked *

Back to top button