ಪ್ರಮುಖ ಸುದ್ದಿ
ಜಿಲ್ಲೆಗೆ ಇಂದು ಮತ್ತೆ 16 ಜನರಿಗೆ ವಕ್ಕರಿಸಿದ ಕೊರೊನಾ
ಯಾದಗಿರಿಃ ಜಿಲ್ಲೆಯಲ್ಲಿ ಕೋವಿಡ್ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಬುಧವಾರ ಮತ್ತೆ 16 ಜನರಿಗೆ ಸೋಂಕು ದೃಢವಾಗಿದೆ.
ಮಂಗಳವಾರ 140 ಹೊಂದಿದ್ದ ಸೋಂಕಿತರ ಸಂಖ್ಯೆ ಬುಧವಾರ 16 ಜನರಲ್ಲಿ ಹರಡುವ ಮೂಲಕ ಜನರ ಎದೆ ಬಡಿತವನ್ನು ದಿನೇ ದಿನೇ ಹೆಚ್ವಾಗುವಂತೆ ಮಾಡಿದೆ.
ಮಂಗಳವಾರ 140 ಜನ ಸೋಂಕಿತರಲ್ಲಿ 9 ಜನರು ಆರೋಗ್ಯವಾಗಿ ಸದೃಢರಾಗಿ ಸೋಂಕಿನಿಂದ ಹೊರಬಂದಿದ್ದರು.
ಆದರೆ ಬುಧವಾರ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿರುವ 1 ವರ್ಷದ ಬಾಲಕಿ ಮತ್ತು 5 ವರ್ಷದೊಳಗಿನ 3 ಮಕ್ಕಳು ಸೇರಿದಂತೆ 16 ಜನ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ.
ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ 14,648 ಜನರನ್ನು 223 ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಸೊಂಕಿತರಿಂದ ಪ್ರಾಥಮಿಕ ಸಂಪರ್ಕ ಹೊಂದಿದ 147 ಜನರಿದ್ದು, ದ್ವಿತೀಯ ಸಂಪರ್ಕ ಹೊಂದಿದ 954 ಜನರಿದ್ದಾರೆ ಎನ್ನಲಾಗಿದೆ.