ಪ್ರತಿನಿತ್ಯ ಈ ಟೀ ಕುಡಿದ್ರೆ ಎಂದಿಗೂ ಹೃದಯಾಘಾತ ಆಗುವುದಿಲ್ಲ!
ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ.
ದಿನಕ್ಕೊಂದು ಟೀ ಕುಡಿಯದಿದ್ದರೆ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ. ಇಂದು ಚಹಾಗಳಲ್ಲೂ ಸಹ ಸಾಕಷ್ಟು ವಿಧಗಳಿವೆ. ಅದರಲ್ಲಿ ಕೆಲವು ವಿಧದ ಚಹಾವನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಇಂದಿನ ದಿನಗಳಲ್ಲಿ ಲೆಮನ್ ಗ್ರಾಸ್ (ನಿಂಬೆ ಹುಲ್ಲು) ಟೀಯನ್ನು ಹೆಚ್ಚು ಕುಡಿಯುತ್ತಿದ್ದಾರೆ. ಪ್ರತಿದಿನ ಈ ಟೀ ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ ಎನ್ನುತ್ತಾರೆ ತಜ್ಞರು. ಲೆಮನ್ ಗ್ರಾಸ್ನಲ್ಲಿ ವಿಟಮಿನ್ಗಳು, ಖನಿಜಗಳು ಮತ್ತು ಇತರ ಸಂಯುಕ್ತಗಳನ್ನು ಒಳಗೊಂಡಂತೆ ಅನೇಕ ಪೋಷಕಾಂಶಗಳಿವೆ. ವಿಟಮಿನ್ಸ್ ವಿಚಾರಕ್ಕೆ ಬಂದರೆ, ಸಣ್ಣ ಪ್ರಮಾಣದ ವಿಟಮಿನ್ ಎ, ಸಿ, ಫೋಲೇಟ್, ನಿಯಾಸಿನ್, ಥಯಾಮಿನ್, ರೈಬೋಫ್ಲಾವಿನ್, ಪಿರಿಡಾಕ್ಸಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲವಿದೆ. ಖನಿಜಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಸತು ಮತ್ತು ತಾಮ್ರವನ್ನು ಹೊಂದಿದೆ.
ಲೆಮನ್ ಗ್ರಾಸ್ನಿಂದ ತಯಾರಿಸಿದ ಈ ಟೀಯನ್ನು ಕುಡಿಯುವುದರಿಂದ ಹಲವಾರು ಅದ್ಭುತವಾದ ಲಾಭಗಳನ್ನು ಪಡೆಯಬಹುದು. ಆಯುರ್ವೇದದಲ್ಲಿ ಹುಲ್ಲಿನಿಂದಲೂ ಹಲವಾರು ರೋಗಗಳನ್ನು ಗುಣಪಡಿಸಬಹುದು ಎಂಬ ಉಲ್ಲೇಖವಿದೆ. ಲೆಮನ್ ಗ್ರಾಸ್ ಟೀ ಕುಡಿಯುವುದರಿಂದ ಹೊಟ್ಟೆ ಹುಣ್ಣು ಕಡಿಮೆಯಾಗುತ್ತದೆ. ಬಿಪಿ ನಿಯಂತ್ರಣಕ್ಕೆ ಬರುತ್ತದೆ ಮತ್ತು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲಾಗುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ಇದು ದೇಹದಿಂದ ಸಂಗ್ರಹವಾದ ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಅಲ್ಲದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಂದರೂ ದೂರವಾಗುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ. ಈ ಚಹಾವನ್ನು ಹೇಗೆ ತಯಾರಿಸುವುದು? ಮೊದಲು ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲನ್ನು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇಡಿ. ಒಂದು ಪಾತ್ರೆಯಲ್ಲಿ ನೀರು ಸುರಿದು ಒಲೆಯ ಮೇಲೆ ಇಟ್ಟು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ಹುಲ್ಲನ್ನು ಹಾಕಿ ಮತ್ತೆ 10 ನಿಮಿಷ ಕುದಿಸಿ, ಹಬೆ ಬರದಂತೆ ಮುಚ್ಚಿಡಿ. ನಂತರ ಒಂದು ಲೋಟಕ್ಕೆ ಸುರಿದುಕೊಂಡು ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಕುಡಿಯಿರಿ. ಈ ಟೀ ಸೇವಿಸಿದರೆ ಕ್ಯಾನ್ಸರ್ ದೂರವಾಗುತ್ತದೆ ಮತ್ತು ಹೃದಯಾಘಾತದಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.