15 ದಿನ ಕರ್ನಾಟಕ ಲಾಕ್ ಡೌನ್ಃ ಸರ್ಕಾರ ನಿರ್ಧಾರ
15 ದಿನ ಕರ್ನಾಟಕ ಲಾಕ್ ಡೌನ್ಃ ಸರ್ಕಾರ ನಿರ್ಧಾರ
ವಿವಿ ಡೆಸ್ಕ್ಃ ಕೊರೊನಾ ತೀವ್ರತೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಅದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಇಡಿ ಕರ್ನಾಟಕ 15 ದಿನ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಇಷ್ಟೆ ಅಲ್ಲ ಹದಿನೈದು ದಿನದಲ್ಲಿ ಕೊರೊನಾ ಹತೋಟಿಗೆ ಬಾರದಿದ್ದರೆ ಮತ್ತೊಂದು ವಾರ ಲಾಕ್ ಡೌನ್ ಘೋಷಿಸುವ ಸಾಧ್ಯತೆ ಸಹ ವ್ಯಕ್ತವಾಗಿದೆ. ಸಂಪುಟ ಸಭೆಯಲ್ಲಿ ಹಲವಾರು ಚರ್ಚೆಗಳು ನಡೆದು ಸಾಧ್ಯ ಬಾಧ್ಯತೆಗಳನ್ನು ನ್ಯುನ್ಯತೆಗಳನ್ನು ಚರ್ಚಿಸಿಯೇ ನಿರ್ಧಾರಕೈಗೊಳ್ಳಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ಪ್ರಕಟಿಸಿವೆ.
ಕೊರೊನಾ ಮಹಾಮಾರಿ ತಡೆಗೆ ನಾಗರಿಕರ ಜೀವ ರಕ್ಷಣೆಗೆ ಲಾಕ್ ಡೌನ್ ಸದ್ಯ ಸ್ಥಿತಿಯಲ್ಲಿ ಅಗತ್ಯ ಎನ್ನುವದನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಸೇವೆಗೆ ಅವಕಾಶ, ಗಾರ್ಮೆಂಟ್ ಸೆಂಟರ್ ಮುಂದುವರೆಯುತ್ತದೆ. ಮೆಡಿಕಲ್ ಗೆ ಯಾವುದೆ ತೊಂದರೆ ಇರುವದಿಲ್ಲ. ಬೆಳಗ್ಗೆ 6 ರಿಂದ ಸಂಜೆವರೆಗೆ ಕರ್ಫ್ಯೂ ಮುಂದುವರೆಯಲಿದೆ.
ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸಹಾಯ ಮಾಡುತ್ತಿದೆ. ರೆಮಿಡಿಸ್ ಔಷಧಿ ಕೇಂದ್ರ ಸರ್ಕಾರ ಕಳುಹಿಸಲಿದೆ. ಉತ್ಪಾದನಾ ವಲಯಕ್ಕೆ ತೊಂದರೆ ಇಲ್ಲ. ಕೃಷಿ ಚಟುವಟಿಕೆನಡೆಯಲಿದೆ. ಉಳಿದಂತೆ ಎಲ್ಲವೂ ಬಂದ್, ಕಟ್ಟಡ ಕಾಮಗಾರಿಗೆ ನಡೆಯಲಿವೆ. ಆಯಾ ಜಿಲ್ಲಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ಎರಡು ವಾರ ಕೊರೊನಾ ತಡೆಗೆ ಸಹಕರಿಸಬೇಕು.
ಕಂಟ್ರೋಲ್ ಬರಲಿಲ್ಲ ಎಂದರೆ ಮತ್ತೆ ಮುಂದುವರೆಸಬೇಕಾಗುತ್ತದೆ. ದಯವಿಟ್ಟು ಜನತೆ ಸಹಕರಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಅಂತರ ಕಾಪಾಡಿಕೊಂಡು ಎಚ್ಚರಿಕೆವಹಿಸಬೇಕು.
ಬಿ.ಎಸ್.ಯಡಿಯೂರಪ್ಪ. ಸಿಎಂ