Homeಪ್ರಮುಖ ಸುದ್ದಿ

Lok sabha elections 2024: ಲೋಕಸಭಾ ಚುನಾವಣೆ 2024ರ ಮೊದಲ ಗೆಲುವು

(Lok sabha elections 2024) 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿದೆ. ಹೌದು, 2024 ರ ರಿಸಲ್ಟ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಇಡೀ ಜಗತ್ತಿನ ಎದುರು ಹೊರಬೀಳಲಿದೆ. ಹೀಗಿದ್ದಾಗ ಮತ ಎಣಿಕೆ ಆರಂಭಕ್ಕೂ ಮೊದಲೇ ಬಿಜೆಪಿ ಒಂದು ಸ್ಥಾನ ಗೆದ್ದು ಬೀಗಿದೆ. ಅಷ್ಟಕ್ಕೂ ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆ ಆಗುವ ಮೂಲಕ 2024 ರ ಏಪ್ರಿಲ್ ತಿಂಗಳಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದ್ದರು. ಈ ಮೂಲಕ ಬಿಜೆಪಿ ಪಕ್ಷ ಲೋಕಸಭೆ ಚುನಾವಣೆ ಆರಂಭದಲ್ಲೇ ಇಡೀ ದೇಶದ ಗಮನವನ್ನ ಸೆಳೆದು, ಶುಭಾರಂಭ ಪಡೆದಿತ್ತು.

ಹೌದು, ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ನಂತರ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡ ಬಳಿಕ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಖೇಶ್ ದಲಾಲ್ ಅವರ ಎದುರಲ್ಲಿ, ಯಾವುದೇ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯೂ ಆಗಿದ್ದರು.

ಇಡೀ ದೇಶದ ಗಮನ ಸೆಳೆದ ಗುಜರಾತ್:
ಸೂರತ್ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಾಕಿ 8 ಮಂದಿ ಸ್ಪರ್ಧಿಗಳ ಪೈಕಿ, ಬಹುಜನ ಸಮಾಜ ಪಾರ್ಟಿಯ ಪ್ಯಾರೇಲಾಲ್ ಭಾರತಿ ಕಣದಿಂದ ಹಿಂದಕ್ಕೆ ಸರಿದಿದ್ದರು. ಹಾಗೂ ಮತ್ತೊಂದು ಕಡೆ ಬಾಕಿ ಇದ್ದ 7 ಇತರರು ಮತ್ತು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದರು. ಈ ನಾಟಕೀಯ ಬೆಳವಣಿಗೆ ಕಾರಣಕ್ಕೆ ಇಡೀ ದೇಶದ ಗಮನ ಗುಜರಾತ್ ಕಡೆಗೆ ನೆಟ್ಟಿತ್ತು. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ದಲಾಲ್ ಅವಿರೋಧವಾಗಿ ಆಯ್ಕೆಯಾಗಿ ಬಿಜೆಪಿಗೆ ಮೊದಲ ಜಯ ತಂದುಕೊಟ್ಟರು.

 

Related Articles

Leave a Reply

Your email address will not be published. Required fields are marked *

Back to top button